More

    ರೈತರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ

    ವಿಜಯಪುರ: ರೈತರ ಸರ್ವತೋಮುಖ ಬೆಳವಣಿಗೆಗೆ ನಂದಿ ಸಕ್ಕರೆ ಕಾರ್ಖಾನೆಯು ಸಹಕಾರಿಯಾಗಲಿ ಎಂದು ಬಿದರಿ ಕಲ್ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಹೇಳಿದರು.
    ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ವಿಸ್ತರಣಾ ಘಟಕದ ಯೋಜನೆಯಡಿ ಶುಕ್ರವಾರ ನಡೆದ ಯಂತ್ರೋಪಕರಣ ಜೋಡಣೆ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.
    ಕಬ್ಬು ಬೆಳೆಗಾರರು ಹಾಗೂ ದುಡಿಯುವ ಕಾರ್ಮಿಕ ವರ್ಗದವರ ಸರ್ವತೋಮುಖ ಬೆಳವಣೆಗೆಗೆ ಕಾರ್ಖಾನೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಬ್ಬನ್ನು ಕಾರ್ಖಾನೆಗೆ ಪೂರೈಸುವ ಮೂಲಕ ರೈತರು ಪ್ರೋತ್ಸಾಹಿಸಬೇಕು ಎಂದರು.

    ಮರೇಗುದ್ದಿ ಶ್ರೀ ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಶಿರಬೂರ, ಉಪಾಧ್ಯಕ್ಷ ಎಚ್.ಆರ್.ಬಿರಾದಾರ, ಕಾರ್ಖಾನೆ ನಿರ್ದೇಶಕರಾದ ಟಿ.ವಿ. ಅಮಲಝರಿ, ರಮೇಶ ಶೇಬಾಣಿ, ಜಿ.ಕೆ. ಕೋನಪ್ಪನವರ, ರಮೇಶ ಜಕರಡ್ಡಿ, ಸಿದ್ದಣ್ಣ ದೇಸಾಯಿ, ಹಣಮಂತ ಕೊಣ್ಣೂರ, ಎಸ್.ಟಿ. ಪಾಟೀಲ, ಹಣಮಂತ ಕಡಪಟ್ಟಿ, ರಾಮಪ್ಪ ಹರಿಜನ, ಜಗದೀಶ ಶಿರಾಳಶೆಟ್ಟಿ, ಎಸ್.ಎಸ್. ಕೊಪ್ಪದ, ಲತಾ ವಿ. ಬಿರಾದಾರ ಪಾಟೀಲ, ಸುರೇಖಾ ಆರ್. ನಿಡೋಣಿ ಹಾಗೂ ಶಂಕ್ರಗೌಡ ಪಾಟೀಲ, ಶಿವನಗೌಡ ಪಾಟೀಲ, ಗಿರೀಶ ಕೋರಡ್ಡಿ, ಪ್ರಧಾನ ವ್ಯವಸ್ಥಾಪಕ ಎ.ಸಿ. ಪಾಟೀಲ, ರೈತರು, ಷೇರು ಸದಸ್ಯರು, ಅಧಿಕಾರಿ ವರ್ಗದ ಸಿಬ್ಬಂದಿ, ಕಾರ್ಮಿಕರು ಭಾಗವಹಿಸಿದ್ದರು.

    ರೈತರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts