More

    ಹೋರಾಟದಲ್ಲಿ ಪ್ರಾಮಾಣಿಕತೆ ಇರಲಿ

    ವಿಜಯಪುರ: ಇತ್ತೀಚಿನ ದಿನಗಳಲ್ಲಿ ಕೆಲ ಸಂಘಟನೆಗಳು ರೈತಪರ ಹೋರಾಟ ಮಾಡುತ್ತೇವೆಂದು ನೆಪ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿ ಹೋರಾಟದ ಮೌಲ್ಯಗಳನ್ನು ಕಳೆಯುತ್ತಿವೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು. ಬಬಲೇಶ್ವರ ಪಟ್ಟಣದ ಜಂಗಮಶೆಟ್ಟಿ ಓಣಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಅಖಂಡ ಕರ್ನಾಟಕ ರೈತ ಸಂಘ ತಾಲೂಕು ಘಟಕದ ಸಂಚಾಲಕರಾಗಿದ್ದ ಗೌಡಪ್ಪಗೌಡ ಮೈಗೂರರ ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    ಇಂದಿನ ದಿನಗಳಲ್ಲಿ ರೈತಪರ ಹೋರಾಟ ನಡೆಸುವ ಕೆಲ ಸಂಘಟನೆಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಹೋರಾಟದ ಮೌಲ್ಯ ಕಡಿಮೆಯಾಗುತ್ತಿದ್ದು, ಹೋರಾಟಗಾರರಿಗೆ ಸರ್ಕಾರ ಕಿಮ್ಮತ್ತು ಕೊಡುತ್ತಿಲ್ಲ. ಆದ್ದರಿಂದ ಯಾವುದೇ ಸಂಘಟನೆಯ ಹೋರಾಟಗಾರರು ಹೋರಾಟ ಮಾಡುವಲ್ಲಿ ಪ್ರಾಮಾಣಿಕತೆ ಇರಬೇಕೆಂದು ಅವರು ಹೇಳಿದರು.
    ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ರಂಜಣಗಿ ಮಾತನಾಡಿ, ದೇಶದಲ್ಲಿ ಶೇ.70 ರಷ್ಟು ರೈತರಿದ್ದರೂ ಸಂಘಟಿತರಾಗುತ್ತಿಲ್ಲ. ರೈತರು ಸಂಘಟಿತರಾದರೂ ನಮ್ಮನ್ನಾಳುವ ಜನಪ್ರತಿನಿಧಿಗಳು ಒಡೆದಾಳುವ ನೀತಿ ಅನುಸರಿಸಿ ಸಂಘಟನೆಯನ್ನು ಛಿದ್ರ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಯಾವುದೇ ಹೋರಾಟಕ್ಕೂ ಸ್ಪಂದಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ಕೂಡ ಬಗೆಹರಿಸುತ್ತಿಲ್ಲ. ಆದ್ದರಿಂದ ರೈತರು ಪಕ್ಷ ಭೇದ, ಜಾತಿ ಭೇದ ಮರೆತು ನಾವೆಲ್ಲ ರೈತರೆಂದು ತಿಳಿದುಕೊಂಡು ಒಂದಾಗಿ ಹೋರಾಟ ಮಾಡಬೇಕಿದೆ ಎಂದರು.
    ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಬಸವನಬಾಗೇವಾಡಿ ತಾಲೂಕು ಘಟಕದ ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ಚನ್ನಪ್ಪಗೌಡ ಪಾಟೀಲ, ಬಸವರಾಜ ಜಂಗಮಶೆಟ್ಟಿ, ಶಿವಾನಂದ ಜಂಗಮಶೆಟ್ಟಿ, ಜಯಶ್ರೀ ಜಂಗಮಶೆಟ್ಟಿ, ಗುರು ಕೋಟ್ಯಾಳ, ನಂದುಗೌಡ ಬಿರಾದಾರ, ರಾಜು ಜಗತಾಪ, ಸಿದ್ದಪ್ಪ ಕಲಬೀಳಗಿ, ಸಂಗಪ್ಪ ಕಾಗೇರಿ, ಅರ್ಜುನ ಹಾವಗೊಂಡ, ರಾಮು ಜಾಧವ, ರಾಜೇಸಾಬ ಕೊರಬು, ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts