More

    ಉತ್ತರ ಪ್ರದೇಶ ಸರ್ಕಾರ ನನ್ನನ್ನು ಉಗ್ರರಂತೆ ನಡೆಸಿಕೊಳ್ಳುತ್ತಿದೆ: ಸಂಸದ ಅಜಂ ಖಾನ್​

    ಲಖನೌ: ಕಸ್ಟಡಿಯಲ್ಲಿ ನನ್ನನ್ನು ಉಗ್ರರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಹಾಗೂ ಸರ್ಕಾರದ ವಿರುದ್ಧ ರಾಂಪುರ ಕ್ಷೇತ್ರದ ಸಂಸದ ಹಾಗೂ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್​ ಆರೋಪಿಸಿದರು.

    ಅಂದಹಾಗೆ ಅಜಂ ಖಾನ್​ರನ್ನು ಫೋರ್ಜರಿ ಪ್ರಕರಣದ ವಿಚಾರಣೆಗಾಗಿ ಸೀತಾಪುರ್​ ಜೈಲಿನಿಂದ ರಾಂಪುರಕ್ಕೆ ಇಂದು ಕರೆದೊಯ್ಯಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೊಲೀಸರು ನನ್ನನ್ನು ಉಗ್ರರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

    ಕಳೆದ ಬುಧವಾರವಷ್ಟೇ ಪೋರ್ಜರಿ ಪ್ರಕರಣದಲ್ಲಿ ಅಜಂ ಖಾನ್​, ಪತ್ನಿ ತಝೀನ್​ ಫಾತಿಮಾ ಮತ್ತು ಮಗ ಅಬ್ದುಲ್ಲಾ ಅಜಂ ಅವರಾಗಿಯೇ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಬಳಿಕ ಅವರನ್ನು ಮಾರ್ಚ್​ 2ರವರೆಗೆ ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

    ತಮ್ಮ ಮಗ ಅಬ್ದುಲ್ಲಾ ಅಜಂರ ಜನನ ಪ್ರಮಾಣ ಪತ್ರವನ್ನು ಫೋರ್ಜರಿ ಮಾಡಿದ ಆರೋಪ ಅಜಂ ಖಾನ್​ ಕುಟುಂಬದ ಮೇಲಿದೆ. ಹೀಗಾಗಿ ಮೊಹಮ್ಮದ್​ ಅಬ್ದುಲ್ಲಾ ಅಜಂ ಖಾನ್​ ವಿಧಾನಸಭಾ ಸದಸ್ಯತ್ವವನ್ನು ಉತ್ತರ ಪ್ರದೇಶ ವಿಧಾನಸಭೆ ರದ್ದುಪಡಿಸಿತ್ತು. ಅಲ್ಲದೆ, ಅಬ್ದುಲ್ಲಾ ಪ್ರತಿನಿಧಿಸುವ ಸೌರಾ ಕ್ಷೇತ್ರ ಖಾಲಿಯಾಗಿದೆ ಎಂದು ಗುರುವಾರ ಘೋಷಿಸಿತ್ತು.

    ಅಜಂ ಖಾನ್​​ ವಿರುದ್ಧ ಸುಮಾರು 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅಕ್ರಮ ಭೂ ಒತ್ತುವಾರಿ ಪ್ರಕರಣವೇ ಹೆಚ್ಚು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts