More

    ಕೋವಿಡ್​ -19 ವಿರುದ್ಧ ಆಯುಷ್​ ಜನಾಂದೋಲನ; ಆಯುರ್ವೇದ, ಯೋಗಗಳತ್ತ ಜನಾಕರ್ಷಣೆ

    ನವದೆಹಲಿ: ಕೋವಿಡ್​-19 ವಿರುದ್ಧ ಅನೇಕರು ತಮ್ಮದೇ ಆದ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ವಿಜ್ಞಾನಿಗಳು, ವಿವಿಧ ಔಷಧ ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದರೆ ಮತ್ತೊಂದೆಡೆ ದೊಡ್ಡದೊಂದು ಗುಂಪು ಜನಾಂದೋಲನ ನಡೆಸಿದೆ.

    ಆಯುಷ್​ ಇಲಾಖೆಯ ಅಂದರೆ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ ಪದ್ಧತಿಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ದೊಡ್ಡ ಮಟ್ಟದಲ್ಲಿ ಕೋವಿಡ್-19 ವಿರುದ್ಧ ಜನಾಂದೋಲನ ನಡೆಸಿದ್ದು, ಈ ಪದ್ಧತಿಯ ಔಷಧ/ಚಿಕಿತ್ಸೆಯತ್ತ ಜನರು ಆಕರ್ಷಿತರಾಗುವಂತೆ ಮಾಡಿದೆ.

    ಆಯುಷ್ ಕ್ಲಿನಿಕ್​, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವೆಲ್​ನೆಸ್​ ಸೆಂಟರ್​ ಹಾಗೂ ಇತರ ಕೇಂದ್ರಗಳು ಇದರಲ್ಲಿ ಭಾಗವಹಿಸಿದ್ದರಿಂದ ಜನಸಾಮಾನ್ಯರಲ್ಲಿ ದೊಡ್ಡಮಟ್ಟದಲ್ಲೇ ಜಾಗೃತಿ ಉಂಟಾಗಿದ್ದು, ಆಯುಷ್​ ಕುರಿತು ಪ್ರಭಾವ ಬೀರಿದೆ. ಅ. 26-30ರ ಐದು ದಿನಗಳಲ್ಲಿ ಡಿಜಿಟಲ್ ಮೀಡಿಯಾ ಮೂಲಕ ಆಯುಷ್​ 110 ಲಕ್ಷ ಮಂದಿಯನ್ನು ಮುಖಾಮುಖಿ ತಲುಪಿದೆ ಎಂದು ಆಯುಷ್ ಇಲಾಖೆ ತಿಳಿಸಿದೆ. ದೇಶಾದ್ಯಂತ ವಿವಿಧೆಡೆ 5ರಿಂದ 8 ಸಾವಿರ ಬ್ಯಾನರ್ಸ್​, 200 ವೃತ್ತಪತ್ರಿಕೆಗಳಲ್ಲಿ ಲೇಖನ, 300 ಜಾಹೀರಾತುಗಳಲ್ಲದೆ 3 ಲಕ್ಷ ಪಾಂಫ್ಲೆಟ್ಸ್​ ಮೂಲಕವೂ ಜಾಗೃತಿ ನಡೆಸಲಾಗಿದೆ. 750 ಆಯುಷ್​ ಮೆಡಿಕಲ್ ಕಾಲೇಜುಗಳು ಹಾಗೂ ಅವುಗಳ ವಿದ್ಯಾರ್ಥಿ ಮತ್ತು ಬೋಧಕ-ಬೋಧಕೇತರ ವರ್ಗ ಇದರಲ್ಲಿ ಪಾಲ್ಗೊಂಡಿದ್ದವು.

    ಮುಂದಿನ ಹಬ್ಬದ ಸಂದರ್ಭದಲ್ಲಿ ಕೋವಿಡ್​-19 ವ್ಯಾಪಿಸುವ ಸಾಧ್ಯತೆ ಹೆಚ್ಚಿರುವುದರಿಂದ, ಹಬ್ಬದಂತೆ ತಡೆಯುವುದು ಸವಾಲಾಗಿರುವುದರಿಂದ ಇಂಥದ್ದೊಂದು ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.
    (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts