More

    ಮನಸ್ಸು ಪ್ರಸನ್ನವಾಗಿದ್ದರೆ ಉತ್ತಮ ಆರೋಗ್ಯ ಸಾಧ್ಯ

    ಸಿಂಧನೂರು: ಆಯುರ್ವೇದ ಸಿದ್ಧಾಂತಗಳಾದ ಋತುಚರ್ಯ,ದಿನಚರ್ಯ, ಸದೃತ್ತನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಡಾ.ಮಂಜುನಾಥ ಅಣಗೌಡ್ರ ಹೇಳಿದರು.

    ಆಯುರ್ವೇದ ಸಿದ್ಧಾಂತಗಳನ್ನು ಪಾಲಿಸಿ

    ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ದೇಹದಲ್ಲಿರುವ ವಾತ, ಪಿತ್ತ, ಕಫ ದೋಷಗಳು ಹಾಗೂ ಸಪ್ತ ಧಾತುಗಳಾದ ರಸ, ರಕ್ತ, ಮಾಂಸ, ಮೇಧ ಅಸ್ತಿ ಮಜ್ಜಾ, ಶುಕ್ರ ಸಮಸ್ಥಿತಿಯಲ್ಲಿ ಇರಬೇಕು. ದೇಹದಿಂದ ಮಲ-ಮೂತ್ರ, ಸ್ವೇದಗಳು ಸಮರ್ಪಕವಾಗಿ ವಿಲೇವಾರಿ ಆಗಬೇಕು. ಮನಸ್ಸು ಪ್ರಸನ್ನವಾಗಿದ್ದರೆ ಉತ್ತಮ ಆರೋಗ್ಯ ಸಾಧ್ಯ ಎಂದರು.

    ಇದನ್ನೂ ಓದಿ: VIDEO| 9 ವರ್ಷದ ಬಳಿಕ ವಿಕೆಟ್​ ಪಡೆದ ವಿರಾಟ್​ ಕೊಹ್ಲಿ: ಅನುಷ್ಕಾ ಶರ್ಮಾ ಪ್ರತಿಕ್ರಿಯೆ ವೈರಲ್​

    ಧನ್ವಂತರಿ ವಿಷ್ಣುವಿನ ಅವತಾರಿಯಾಗಿದ್ದು, ಸುಶ್ರುತ ಮಹಾಋಷಿಗಳ ಗುರುಗಳಾದ ಧನ್ವಂತರಿಯು ಜಗತ್ತಿಗೆ ಶಲ್ಯ ಚಿಕಿತ್ಸೆ ನೀಡಿದ್ದಾರೆ. ಧನ್ವಂತರಿ ಆರೋಗ್ಯ ದೇವತೆಯಾಗಿದ್ದು, ಎಲ್ಲರಿಗೂ ಆರೋಗ್ಯ ದಯಪಾಲಿಸಲಿ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts