More

    ಹಿಂದು ರಾಷ್ಟ್ರ ಸಂರಕ್ಷಣೆಗೆ ಸಂಘಟಿತರಾಗಿ

    ಚಿಂಚೋಳಿ: ಹಿಂದುಗಳೆಲ್ಲ ಒಗ್ಗೂಡಿ ಸಮೃದ್ಧ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಶಸ್ತ್ರ, ಶಾಸ್ತ್ರದೊಂದಿಗೆ ಹೋರಾಟ ನಡೆಸಬೇಕಿದೆ. ಹಿಂದು ಸ್ವರಾಜ್ಯ ರಾಷ್ಟ್ರ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಘಟಿತರಾಗಬೇಕು ಎಂದು ಚಂದನಕೇರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯರು ಹೇಳಿದರು.

    ಶ್ರೀ ಮಹಾಂತೇಶ್ವರ ಮಠದಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ವಿಶ್ವ ಹಿಂದು ಪರಿಷತ್, ಬಜರಂಗ ದಳದಿಂದ ಶನಿವಾರ ಹಮ್ಮಿಕೊಂಡಿದ್ದ ಅಯೋಧ್ಯೆಯ ಮಂತ್ರಾಕ್ಷತೆ ಭವ್ಯ ಮೆರವಣಿಗೆ, ಬೈಠಕ್ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀರಾಮ ಮಂದಿರ ಹಿಂದುಗಳ ಅಸ್ಮಿತೆಯಾಗಿದೆ. ಜನರು ಹೇಗೆ ಬದುಕಬೇಕು ಎಂಬುದನ್ನು ಶ್ರೀರಾಮ ಕಲಿಸಿಕೊಟ್ಟಿದ್ದಾನೆ. ದೈವಿ ಪುರುಷ, ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಗಳ ಭಾವನೆಗಳನ್ನು ಎತ್ತಿ ಹಿಡಿಯುವ ಮೂಲಕ ಸನಾತನ ಧರ್ಮದ ಇತಿಹಾಸ ಮರುಕಳಿಸುವಂತೆ ಮಾಡುತ್ತಿದ್ದಾರೆ ಎಂದರು.

    ಆರ್‌ಎಸ್‌ಎಸ್ ಜಿಲ್ಲಾ ಸಂಯೋಜಕ ಅಶೋಕ ಪಾಟೀಲ್ ಮಾತನಾಡಿ, ಅಯೋಧ್ಯೆಯ ಕರ ಸೇವಕರಾಗಿ ತಾಲೂಕಿನಿಂದ ೮ ಜನರು ಭಾಗವಹಿಸಿದ್ದರು ಎಂದು ಸ್ಮರಿಸಿದರು.

    ಪ್ರಮುಖರಾದ ಸಂಜಯ ಮಿಸ್ಕಿನ್, ಜಗದೀಶಸಿಂಗ್ ಠಾಕೂರ್, ರೇವಣಸಿದ್ದಪ್ಪ ಮೋಘಾ, ಶ್ರೀಹರಿ ಕಾಟಾಪುರ, ಶಿವಯೋಗಿ ರುಸ್ತಂಪುರ, ಅಶೋಕ ಚವ್ಹಾಣ್, ರಾಜು ಪವಾರ್, ಗಿರಿರಾಜ ನಾಟಿಕಾರ, ಶ್ರೀಮಂತ ಕಟ್ಟಿಮನಿ, ಅಲ್ಲಮಪ್ರಭು ಹುಲಿ, ರವಿಕಾಂತ ಹೊಸಬಾಯಿ, ಕಾಶೀನಾಥ ನಾಟೀಕಾರ, ಶ್ರೀಧರ ಪಾಟೀಲ್, ಭಾಸ್ಕರ್ ಕುಲಕರ್ಣಿ, ಸತೀಶರೆಡ್ಡಿ, ಚಂದ್ರಶೇಖರ ಗುತ್ತೇದಾರ್, ಅರವಿಂದ ಚಂದಿಮನಿ, ವೀರಶೆಟ್ಟಿ ಮನ್ನಳ್ಳಿ, ಉಮೇಶ ದಂಡಿನ್, ಗುರುರಾಜ ಜೋಶಿ, ಸಂಗೀತಾ ಪವಾರ್, ರಾಕೇಶ ಗೋಸೂಲ್, ಸಿದ್ದು ಹೊಸಳ್ಳಿ, ನಾಗಪ್ಪ ಮೈಲ್ವಾರ್, ಗೀತಾ ಮೈಲ್ವಾರ್, ನೀಲಾ ವಕೀಲ್, ಅನೀಲಕುಮಾರ ಅಣವಾರ್, ಹಣಮಂತ ಭೋವಿ, ಅನೀಲ ಕಂಟ್ಲಿ, ಚನ್ನು ರೋಡ್ ಕಲ್ಲೂರ, ಸಿದ್ದಯ್ಯ ಸ್ವಾಮಿ, ಶಶಿಧರ ಬೆನೂರ್, ಸಂಗಮೇಶ, ರಾಜು ಶಿವರಾಂಪುರ, ರಾಮರೆಡ್ಡಿ ಪಾಟೀಲ್, ಶರಣು ಭಕ್ತಂಪಳ್ಳಿ, ಕಾಶೀನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts