More

    ಸ್ತನ ಕ್ಯಾನ್ಸರ್ ತಡೆಗೆ ಜಾಗೃತಿ ಅಗತ್ಯ

    ಧಾರವಾಡ: ವಿಶ್ವದಲ್ಲಿ ಸ್ತನ ಕ್ಯಾನ್ಸರ್‌ನಿಂದ ಮರಣ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಅರಿವು ಮೂಡಿಸುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು. ಪ್ರತಿಯೊಬ್ಬ ಮಹಿಳೆಯೂ ಸ್ವಯಂಪ್ರೇರಿತರಾಗಿ ಸ್ತನರೇಖನ (ಮ್ಯಾಮೊಗ್ರಫಿ) ಸ್ಕಿçÃನಿಂಗ್‌ಗೆ ಒಳಗಾಗಬೇಕು. ಅಲ್ಲದೆ, ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರತ್ನಮಾಲಾ ಎಂ. ದೇಸಾಯಿ ಹೇಳಿದರು.
    ನಗರದ ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ವಿಕಿರಣಶಾಸ್ತç ವಿಭಾಗದಿಂದ ಬುಧವಾರ ಆಯೋಜಿಸಿದ್ದ ಸ್ತನ ಕ್ಯಾನ್ಸರ್ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಕ್ಯಾನ್ಸರ್ ವಿರುದ್ಧ ನಾವೆಲ್ಲರು ಒಗ್ಗಟಾಗಿ ಹೋರಾಡಬೇಕು. ಕ್ಯಾನ್ಸರ್ ರೋಗಗಳು ಜೀವನ ಶೈಲಿಯಲ್ಲಿ ಪರಿಣಾಮ ಬೀರಿ ಖಿನ್ನತೆ ಹೆಚ್ಚುಸುತ್ತದೆ. ಸ್ತನ ಕ್ಯಾನ್ಸರ್ ಪತ್ತೆಗೆ ನಿಯಮಿತವಾಗಿ ತಪಾಸಣೆ ಅಗತ್ಯ ಎಂದರು.
    ಉಪ ಕುಲಪತಿ ಡಾ. ನಿರಂಜನ್ ಕುಮಾರ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ಅತಿಥಿಯಾಗಿ ಪಾಲ್ಗೊಂಡಿದ್ದರು.
    ಸಹ ಉಪ ಕುಲಪತಿ ಡಾ. ಎಸ್.ಕೆ. ಜೋಶಿ, ವೈದ್ಯಕೀಯ ಅಽÃಕ್ಷಕ ಡಾ. ಕಿರಣ ಹೆಗ್ಡೆ, ವಿಕಿರಣಶಾಸ್ತç ವಿಭಾಗದ ಮುಖ್ಯಸ್ಥ ಡಾ. ಪ್ರೀತಮ್ ಪಾಟೀಲ, ಡಾ. ನರೇಂದ್ರಕುಮಾರ ಶಾ, ವಿಶ್ವವಿದ್ಯಾಲಯದ ಅಽಕಾರಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    ಡಾ. ಪ್ರೇರಣಾ ಸ್ತನ ಕ್ಯಾನ್ಸರ್ ತಪಾಸಣೆ ಮತ್ತು ಪತ್ತೆಯ ಮಹತ್ವ ವಿವರಿಸಿದರು. ಡಾ. ಅನುಷಾ ಸ್ವಾಗತಿಸಿದರು. ಡಾ. ದಾನೇಶ್ವರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts