More

    ಕಾಯಿಲೆ ಮುನ್ನ ಜಾಗೃತಿ ಅಗತ್ಯ

    ಸಾಗರ: ಆರ್ಥಿಕ ವಹಿವಾಟಿನ ಜತೆಗೆ ಷೇರುದಾರರ ಆರೋಗ್ಯದ ಬಗ್ಗೆ ಗಮನ ಹರಿಸುವ ಉದ್ದೇಶದಿಂದ ಆರೋಗ್ಯ ಭಾಗ್ಯದಂತಹ ಕಾರ್ಯಕ್ರಮವನ್ನು ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದು ಪಟ್ಟಣ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸತೀಶ್ ತಿಳಿಸಿದರು.
    ಸಾಗರ ಟೌನ್ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸಂಸ್ಥೆ ಮತ್ತು ಕಂಪಾನಿಯೋ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಫುಟ್ ಲ್ಸ್ ಥೆರಪಿಯಲ್ಲಿ ಅವರು ಮಾತನಾಡಿದರು.
    ಒತ್ತಡದ ನಡುವೆ ಎಲ್ಲರ ಬದುಕು ನಡೆಯುತ್ತಿರುತ್ತದೆ. ಕನಿಷ್ಠ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಮಯ ಇರುವುದಿಲ್ಲ. ಕಾಯಿಲೆ ಬರುವುದಕ್ಕಿಂತ ಮೊದಲೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಈ ಹಿನ್ನೆಲೆಯಲ್ಲಿ ಅನೇಕ ದಿನಗಳಿಂದ ಕೈಕಾಲು ನೋವು ಅನುಭವಿಸುತ್ತಿರುವವರಿಗೆ ಫುಟ್ ಲ್ಸ್ ಥೆರಫಿ ಮೂಲಕ ನೋವು ನಿವಾರಿಸುವ ಹೊಸ ವಿಧಾನ ಹೆಚ್ಚು ಜನಪ್ರಿಯವಾಗಿದೆ. ಥೆರಪಿಯನ್ನು ಸಂಸ್ಥೆಯ ಷೇರುದಾರರಿಗೆ ಉಚಿತವಾಗಿ ನೀಡಲಾಗುತ್ತಿದೆ. ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
    ಕಂಪಾನಿಯೋ ಸಂಸ್ಥೆಯ ಉನ್ನತ್ ಮಾತನಾಡಿ, ಈ ಚಿಕಿತ್ಸೆಯನ್ನು 12 ದಿನಗಳ ಕಾಲ ನಿರಂತರವಾಗಿ ಮಾಡಬೇಕಾಗುತ್ತದೆ. ಮಂಡಿ, ಮೀನಖಂಡ, ಕಾಲುನೋವು ಇತರೆ ನೋವುಗಳಿಂದ ಬಳಲುತ್ತಿರುವವರಿಗೆ ಈ ಥೆರಪಿ ಹೆಚ್ಚು ಪ್ರಯೋಜನಕಾರಿ ಎಂದರು.
    ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್, ಕಾಸಂಸ್ಥೆ ಉಪಾಧ್ಯಕ್ಷ ಬಸವರಾಜ್, ಎಸ್.ಬಿ.ರಘುನಾಥ್, ವಿ.ಶಂಕರ್, ಉಮೇಶ್ ಹಿರೇನೆಲ್ಲೂರು, ಪ್ರಮೋದ್, ಶ್ರೀಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts