More

    ಸಾಧಕರಿಗೆ ಪಂಡಿತ ಪುಟ್ಟರಾಜ ಪುರಸ್ಕಾರ ಪ್ರದಾನ

    ಹಾವೇರಿ: ತಾಲೂಕಿನ ದೇವಗಿರಿಯ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಪುಟ್ಟರಾಜರ 106ನೇ ಜಯಂತಿ ಅಂಗವಾಗಿ ಮಂಗಳವಾರ ರಾತ್ರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪುಟ್ಟರಾಜ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

    ಕುಮಾರದೇವರು ಹಿರೇಮಠ ಅವರಿಗೆ ಜ್ಞಾನಸಿರಿ, ಡಾ. ಎಸ್.ಪಿ. ಬಳಿಗಾರ ಅವರಿಗೆ ವೈದ್ಯಸಿರಿ, ಡಾ. ಮೃತ್ಯುಂಜಯ ಅಗಡಿ, ಪಂಡಿತ ಮೌನೇಶಕುಮಾರ ಛಾವಣಿ ಅವರಿಗೆ ಸಂಗೀತಸಿರಿ, ಸೋಮಶೇಖರ ರಾವಳ ಅವರಿಗೆ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಮರಳಿದ ಜಗದೀಶ ಬಸವಣ್ಣೆಪ್ಪ ಸುಳ್ಳಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಪುಟ್ಟರಾಜರ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆ ದೇವಗಿರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗವಾಯಿಗಳ ಸಮುದಾಯ ಭವನದಲ್ಲಿ ಮಧ್ಯಾಹ್ನ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ 3 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

    ಸಾನ್ನಿಧ್ಯ ವಹಿಸಿದ್ದ ಕೂಡಲ ಮಠದ ಗುರುಮಹೇಶ್ವರ ಶಿವಾಚಾರ್ಯರು ಮಾತನಾಡಿ, ದಾಂಪತ್ಯ ಜೀವನ ಆರಂಭಿಸುತ್ತಿರುವ ನವದಂಪತಿಗಳು ಪರಸ್ಪರ ನಂಬಿಕೆ, ಹೊಂದಾಣಿಕೆಯಿಂದ ಸಾರ್ಥಕ ಜೀವನ ಸಾಗಿಸಬೇಕು ಎಂದರು.

    ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ತಾಪಂ ಸದಸ್ಯ ಸತೀಶ ಸಂದಿಮನಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮುತ್ತಣ್ಣ ಯಲಿಗಾರ, ಪ್ರಭಾಕರ ಮಂಗಳೂರು, ವಿ.ವಿ. ಹಿರೇಮಠ, ಬಸವರಾಜ ಬೆಳವಡಿ, ಸಣ್ಣಪ್ಪ ಮಾಳಿ ಇತರರಿದ್ದರು. ನಂತರ ವಿವಿಧ ಕಲಾವಿದರಿಂದ ಸಂಗೀತ, ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಪುಟ್ಟರಾಜರು ನಾಡಿನ ಅನೇಕ ಸಾಧಕರಿಗೆ ಪ್ರೇರಣೆಯಾಗಿದ್ದಾರೆ. ಸಂಗೀತದ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಬಹುಪಾಲು ಅಂಧರು ಗವಾಯಿ ಅವರನ್ನು ಪ್ರೇರಣೆಯಾಗಿಸಿಕೊಂಡು ಸಾಧನೆ ಮಾಡಿದ್ದಾರೆ. ಅಂಧರ ಬಾಳಿಗೆ ದಾರಿದೀಪದಂತೆ ಪುಟ್ಟರಾಜರು ಸದಾ ಪ್ರೇರಣೆಯಾಗಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

    | ಯು.ಬಿ. ಬಣಕಾರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts