More

  ಭಾರತೀಯರು ಸಂಭ್ರಮಿಸುವ ಉತ್ಸವ

  ಶೃಂಗೇರಿ: ಗಣರಾಜೋತ್ಸವ ಪ್ರತಿ ಭಾರತೀಯನೂ ಸಂಭ್ರಮಿಸುವ ಉತ್ಸವ. ದೇಶದ ಆತ್ಮಗೌರವ ಪ್ರಸ್ತುತಪಡಿಸುವ ರಾಷ್ಟ್ರೀಯ ಹಬ್ಬಗಳ ದಿನಾಚರಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ತಹಸೀಲ್ದಾರ್ ಗೌರಮ್ಮ ಹೇಳಿದರು.

  ಪಪಂನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬದ್ಧತೆ ಇದ್ದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಾಗಲು ಸಾಧ್ಯ. ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಲಾಗಿದ್ದು, ಯುವಪೀಳಿಗೆ ರಾಷ್ಟ್ರ ಪ್ರೇಮ ಬೆಳೆಸಿಕೊಂಡು ದೇಶದ ಭವಿಷ್ಯದ ಬೆಳಕಾಗಬೇಕು ಎಂದು ತಿಳಿಸಿದರು.
  ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಸಂಸ್ಥೆಗಳು ರಚಿಸಿದ್ದ ಸ್ತಬ್ಧ ಚಿತ್ರಗಳು ನೋಡುಗರ ಗಮನ ಸೆಳೆದವು. ತಾಲೂಕಿನ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
  ಪಪಂ ಸದಸ್ಯರಾದ ಬಿ.ಅರುಣಾ, ರಫೀಕ್ ಅಹಮದ್, ಸಮುದಾಯ ಅಭಿವೃದ್ಧಿ ಅಧಿಕಾರಿ ಕುಪ್ಪೇರಾವ್ ಮೂರಾಮನಿ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಸದಸ್ಯೆ ಪುಷ್ಪ್ಪಾ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಸಿ.ಶಂಕರಪ್ಪ, ಸಿಡಿಪಿಒ ಎನ್.ಜಿ.ರಾಘವೇಂದ್ರ, ಬಿಆರ್‌ಸಿ ಅಧಿಕಾರಿ ವಿಜಯ್‌ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಲಯನ್ಸ್ ಅಧ್ಯಕ್ಷ ವಿವೇಕ್ ಬೇಗಾನೆ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts