More

    ಹೆಲ್ಮೆಟ್ ಧರಿಸಿ ಜೀವ ಹಾನಿ ತಪ್ಪಿಸಿ

    ಹುನಗುಂದ: ಅಪಘಾತ ಪ್ರಕರಣಗಳು ಪಟ್ಟಣದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಜೀವ ಹಾನಿಯಾಗುವುದನ್ನು ತಪ್ಪಿಸಬೇಕು ಎಂದು ಹುನಗುಂದ ಪೊಲೀಸ್ ಠಾಣೆ ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಸಾರ್ವಜನಿಕರಿಗೆ ಹೆಲ್ಮೆಟ್ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
    ಕಳೆದ ವಾರ ಹುನಗುಂದ ಪಟ್ಟಣದ ಹೊರವಲಯದಲ್ಲಿ ಎರಡ್ಮೂರು ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುತ್ತಿರುವರೇ ಮೃತಪಟ್ಟಿದ್ದಾರೆ. ಅದಕ್ಕಾಗಿ ಸರ್ಕಾರ ಬೈಕ್ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸದ ಕಾರಣ ಅಪಘಾತ ಸಂಭವಿಸಿ ತಲೆ ಪೆಟ್ಟು ಬಿದ್ದು ಸಾವು ನೋವುಗಳು ಸಂಭವಿಸುತ್ತಿವೆ ಎಂದರು.

    ರಸ್ತೆ ಅಪಘಾತದಲ್ಲಿ ಶೇ.70 ರಷ್ಟು ಜನರು ತಲೆಗೆ ಪಟ್ಟಾಗಿಯೇ ಸಾವಿಗೀಡಾಗಿದ್ದಾರೆ. ದ್ವಿಚಕ್ರ ವಾಹನ ಸವಾರ ಅಪಘಾತ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆ ಶೇ.80 ರಷ್ಟು ಇರುತ್ತದೆ. ಪ್ರತಿಯೊಬ್ಬ ಬೈಕ್ ಸವಾರ ಹೆಲ್ಮೆಟ್ ಬಳಸಿ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳುವ ಜತೆಗೆ ತಮ್ಮ ಕುಟುಂಬ ಭದ್ರತೆಯನ್ನು ಕಾಪಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ಮೋಟಾರ್ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಬೇಕಾಗುವುದು. ಚಿಕ್ಕ ಮಕ್ಕಳು ಬೈಕ್ ಓಡಿಸುವುದು, ಅವರ ಕೈಯಲ್ಲಿ ಬೈಕ್ ಕೊಡುವುದು ಅಪರಾಧವಾಗಿದೆ. ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದರು.

    ಅಮರೇಶ ನಾಗೂರ, ಮಹಾಂತೇಶ ಹಳ್ಳೂರ, ಬಸವರಾಜ ಗೊಣ್ಣಾಗರ, ಲಕ್ಷ್ಮಣ ಗಾಯಕವಾಡ, ಬಸವರಾಜ ವಾಲೀಕಾರ, ಮಂಜುನಾಥ ಬಡಿಗೇರ, ವಿಜಯ ಭಾವಿಕಟ್ಟಿ, ಅಮರೇಶ ಬಂಡರಗಲ್ಲ, ರಾಘು ಬಿಸನಾಳ, ಪ್ರಕಾಶ ಶಿಂಧೆ, ಸಮೀರ ಸುತಗುಂಡರ, ಮಲ್ಲಪ್ಪ ಮಜ್ಜಗಿ, ಪೊಲೀಸ್ ಸಿಬ್ಬಂದಿ ಬಸವರಾಜ ಗೌಡರ, ಸಿ.ಸಿ.ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts