More

    ಸ್ಲೆಡ್ಜಿಂಗ್ ಮಾಡಿ ಟ್ರೋಲ್ ಆದ ಆಸ್ಟ್ರೇಲಿಯಾ ನಾಯಕ

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗರು ಮೈದಾನದಲ್ಲಿ ಎದುರಾಳಿ ಆಟಗಾರರನ್ನು ಕೆಣಕುವುದು, ರೇಗಿಸುವುದು ಹೊಸದೆನಲ್ಲ. ಅದರಲ್ಲೂ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವೇಳೆ ಒಂದು ಕೈ ಹೆಚ್ಚೆ ಎಂದು ಹೇಳಬಹುದು. ಪ್ರಸಕ್ತ ಟೆಸ್ಟ್ ಸರಣಿಯಲ್ಲೂ ಮುಂದುವರಿದಿದೆ. ಸ್ವತಃ ನಾಯಕನೇ ಇದರ ನೇತೃತ್ವ ವಹಿಸಿರುವುದು ವಿಪರ್ಯಾಸ. ಜಿಗುಟು ಬ್ಯಾಟಿಂಗ್ ಮೂಲಕ ಆಸೀಸ್ ತಂಡಕ್ಕೆ ತಲೆ ನೋವಾಗಿದ್ದ ಹನುಮ ವಿಹಾರಿ ಹಾಗೂ ಆರ್.ಅಶ್ವಿನ್ ವಿರುದ್ಧ ಟೀಮ್ ಪೇನ್ ಕೆಂಡಕಾರಿದ್ದಾರೆ. ಸ್ಟಂಪ್ಸ್ ಕೆಳಗಿದ್ದ ಮೈಕ್ರೋ ಫೋನ್‌ನಲ್ಲೂ ದಾಖಲಾಗಿದೆ. ಕೊನೇ ದಿನಾಟದಲ್ಲಿ ಮೂರು ಕ್ಯಾಚ್ ಬಿಟ್ಟ ಪೇನ್, ಪಂದ್ಯ ಡ್ರಾಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ.

    ಇದನ್ನೂ ಓದಿ: ವಿಹಾರಿ-ಅಶ್ವಿನ್ ಪ್ರತಿರೋಧ, ಸಿಡ್ನಿ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿದ ಭಾರತ

    ಹನುಮ ವಿಹಾರಿ-ಆರ್.ಅಶ್ವಿನ್ ಜೋಡಿಯನ್ನು ಬೇರ್ಪಡಿಲು ನಾಯಕ ಟೀಮ್ ಪೇನ್ ಎಷ್ಟೇ ಪ್ರಯೋಗ ನಡೆಸಿದರೂ ಪ್ರಯೋಜವಾಗಲಿಲ್ಲ. ಆಸ್ಟ್ರೇಲಿಯಾ ಆಟಗಾರರ ಮಹಾ ಅಸ ಸ್ಲೆಡ್ಜಿಂಗ್‌ಗೂ ಪೇನ್ ಮೊರೆ ಹೋದರು. ಅಗಿಂದಾಗಲೇ ಅಶ್ವಿನ್-ಹನುಮ ವಿಹಾರಿಯನ್ನು ಪೇನ್ ಕೆಣಕುತ್ತಿದ್ದರು. ಅಶ್ವಿನ್ ಬಳಿ ಬಂದು ನಿನ್ನನ್ನು ಗಾಬಾದಲ್ಲಿ (ಬ್ರಿಸ್ಬೇನ್) ನೋಡಿಕೊಳ್ಳುವೆ ಬಾ ಎಂದು ಹೇಳಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಶ್ವಿನ್, ನೀನು ಭಾರತಕ್ಕೆ ಬಾ, ಅದೇ ನಿನ್ನ ಕಡೇ ಸರಣಿ ಆಗಬಹುದು ಎಂದು ತಿರುಗೇಟು ನೀಡಿದ್ದಾರೆ. ಮೂರು ಕ್ಯಾಚ್ ಕೈಚೆಲ್ಲಿದ ಟೀಮ್ ಪೇನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ. ರಿಷಭ್ ಪಂತ್ ವೈಯಕ್ತಿಕ 3 ರನ್‌ಗಳಿಸಿದ್ದ ವೇಳೆ ಮೊದಲ ಕ್ಯಾಚ್ ಕೈಚೆಲ್ಲಿದರು. ಇನಿಂಗ್ಸ್ ಮುಕ್ತಾಯಕ್ಕೆ 5 ಓವರ್ ಬಾಕಿ ಇರುವಾಗ ಸ್ಟಾರ್ಕ್ ಓವರ್‌ನಲ್ಲಿ ಹನುಮ ವಿಹಾರಿ ಕ್ಯಾಚ್ ಬಿಟ್ಟರು. ಕ್ಯಾಚ್‌ಗಳು ಮ್ಯಾಚ್ ಗೆಲ್ಲಿಸುತ್ತವೆ ನೆನಪಿರಲಿ ಎಂದು ಕೆಲಮಂದಿ ಕಾಲೆಳೆದಿದ್ದಾರೆ.

    ಇದನ್ನೂ ಓದಿ: ಮಕ್ಕಳ ತಂಟೆಗೆ ಬಂದ್ರೆ ಹುಷಾರ್…ಕೋಡ್ಲು ಎಚ್ಚರಿಕೆ

    ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಅಂತ್ಯಗೊಂಡ ಪಂದ್ಯದಲ್ಲಿ 2 ವಿಕೆಟ್‌ಗೆ 98 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ 5 ವಿಕೆಟ್‌ಗೆ 334 ರನ್‌ಗಳಿಸಿ ಡ್ರಾ ಸಾಧಿಸಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 338 ರನ್‌ಗಳಿಸಿದರೆ, ಭಾರತ 244 ರನ್ ಗಳಿಸಿದ್ದ ಭಾರತ 94 ರನ್ ಹಿನ್ನಡೆ ಅನುಭವಿಸಿತು. ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 312 ರನ್ ಗಳಿಸಿದ ಆಸ್ಟ್ರೇಲಿಯಾ ಭಾರತಕ್ಕೆ 407ರನ್ ಗೆಲುವಿನ ಗುರಿ ನೀಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts