More

    ಟೀಮ್ ಇಂಡಿಯಾ ಆಟಗಾರರಿಗೆ ಸ್ಟೀವನ್ ಸ್ಮಿತ್ ಹಾಕಿರುವ ಚಾಲೆಂಜ್ ಯಾವುದು..?

    ಸಿಡ್ನಿ: ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ತವರಿನಲ್ಲಿ ಭಾರತ ವಿರುದ್ಧ ನಡೆಯಲಿರುವ ಸರಣಿಗೆ ಪ್ರಮುಖ ಪಾತ್ರವಹಿಸಲು ಸಜ್ಜಾಗಿದ್ದಾರೆ. ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭಗೊಳ್ಳಲಿದೆ. ಕಳೆದ ಬಾರಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಸ್ಮಿತ್ ಹಾಗೂ ಮತ್ತೋರ್ವ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇರಲಿಲ್ಲ. ಭಾರತದ ವೇಗಿಗಳನ್ನು ಎದುರಿಸಲು ಸಜ್ಜಾಗಿರುವ ಸ್ಮಿತ್ ಇದಕ್ಕೆ ಈಗಾಗಲೇ ತಂತ್ರ ರೂಪಿಸುತ್ತಿದ್ದಾರೆ. ಭಾರತದ ವೇಗಿಗಳ ಶಾಟ್ ಬಾಲ್ ಎಸೆತಗಳನ್ನು ಎದುರಿಸಲು ಕರಗತ ಮಾಡಿಕೊಳ್ಳುತ್ತಿದ್ದಾರೆ.

    ಶಾಟ್ ಬಾಲ್ ಎಸೆತಗಳನ್ನು ಎದುರಿಸಲು ಪರದಾಡುವ ಸ್ಮಿತ್, ಇದಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಲು ಸ್ಮಿತ್ ಹೆಚ್ಚಾಗಿ ಶಾಟ್‌ಬಾಲ್ ಎಸೆತಗಳಿಗೆ ಔಟ್ ಆಗಿದ್ದರು. ಇದಕ್ಕಾಗಿ ಎಡಗೈ ಹಾಗೂ ಬಲಗೈ ಇಬ್ಬರೂ ವೇಗಿಗಳ ಶಾಟ್‌ಬಾಲ್ ಎಸೆತಗಳನ್ನೇ ಎದುರಿಸುತ್ತಿದ್ದಾರೆ. ಎದುರಾಳಿ ತಂಡದ ಎಂಥ ಪ್ರಯೋಗ ನಡೆಸಿದರೂ ಎದುರಿಸಲು ನಾನು ಸಜ್ಜಾಗಿದ್ದೇನೆ. ಎದುರಾಳಿಗಳು ಶಾಟ್ ಬಾಲ್ ಎಸೆದ ಎಸೆದರೂ ಎದುರಿಸುಬವೆ ಎಂದಿದ್ದಾರೆ.

    ಉಭಯ ತಂಡಗಳು ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯ ಅಹರ್ನಿಶಿಯಾಗಿ ನಡೆಯಲಿದೆ. ಇದಕ್ಕೂ ಮೊದಲು ನವೆಂಬರ್ 27 ರಿಂದ ಏಕದಿನ ಸರಣಿ ನಡೆಯಲಿದೆ.

    ಅದ್ದೂರಿಯಾಗಿ ಹಬ್ಬ ಆಚರಿಸಿ, ಪಟಾಕಿ ಮಾತ್ರ ಸಿಡಿಸಬೇಡಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟ ವಿರಾಟ್ ಕೊಹ್ಲಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts