More

    ಭಾವೈಕ್ಯದ ಸಂಕೇತ ಕನ್ನಡ ಭಾಷೆ

    ಔರಾದ್: ಗಡಿ ಭಾಗದ ಮಕ್ಕಳ ಮನಸ್ಸಿನಲ್ಲಿ ಕನ್ನಡ ಭಾಷೆ, ಸಾಹಿತ್ಯದ ಆಸಕ್ತಿ ಬೆಳೆಸುವುದು ಅನಿವಾರ್ಯ. ಭಾಷೆ ಉಳಿದರೆ ನಾಡು-ನುಡಿ, ಸಂಸ್ಕೃತಿಗೆ ಉಳಿಗಾಲವಿದೆ. ಕನ್ನಡ ಬರೀ ಭಾಷೆಯಲ್ಲ, ಭಾವೈಕ್ಯದ ಸಂಕೇತ. ಸಂಬಂಧ ಬೆಸೆಯುವ ಕೊಂಡಿ ಎಂದು ಸಾಹಿತಿ ಜಗನ್ನಾಥ ಮೂಲಗೆ ಹೇಳಿದರು.
    ಮಾನೂರ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಏರ್ಪಡಿಸಿದ್ದ `ಸಾಹಿತ್ಯ ಸೊಬಗು’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಹಾರಾಷ್ಟç, ತೆಲಂಗಾಣದ ಕೂಗಳತೆ ದೂರದಲ್ಲಿರುವ ಮಾನೂರ(ಕೆ)ದಲ್ಲಿ ಹೆಚ್ಚಿನ ಮಕ್ಕಳು ಕನ್ನಡದಲ್ಲಿ ಶಿಕ್ಷಣ ಪಡೆಯುತ್ತಿರುವುದು ಸಂತಸ ತಂದಿದೆ. ಇಲ್ಲಿನ ಮಕ್ಕಳಿಗೆ ಎಲ್ಲ ನೆರವು ನೀಡಲು ಕಸಾಪ ಮುಂದಾಗಬೇಕು ಎಂದರು.
    ಕಸಾಪ ತಾಲೂಕು ಅಧ್ಯಕ್ಷ ಡಾ.ಶಾಲಿವಾನ್ ಉದಗೀರೆ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಗಡಿ ಭಾಗದ ಮಕ್ಕಳ ಮನಸ್ಸಿನಲ್ಲಿ ಕನ್ನಡ ಪ್ರೇಮ ಹುಟ್ಟಿಸುವ ಕಾರ್ಯಕ್ರಮವೇ ಸಾಹಿತ್ಯ ಸೊಬಗು ಎಂದು ಹೇಳಿದರು.
    ದೇವಿದಾಸ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಎಂ.ಡಿ. ನೈಮೋದ್ದಿನ್, ಝರೆಪ್ಪ ಬಿರಾದಾರ, ಜ್ಞಾನೇಶ್ವರ ವಾಡಿಕರ್, ಮಧುಕರ ಸುವರ್ಣಕಾರ, ಉದಯಕುಮಾರ ಬಡಚ್ಚಿ, ಸಂಜೀವಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts