More

    ಬಿಡಿಎಯಿಂದ ಹಲಗೆವಡೇರಹಳ್ಳಿ ಮಳಿಗೆಗಳ ಹರಾಜು ಶೀಘ್ರ

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಸಾರ್ವಜನಿಕರಿಗೆ ವಿತರಿಸಲು ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ.

    ಕೆಲ ವರ್ಷಗಳ ಹಿಂದೆಯೇ 50 ಮಳಿಗೆಗಳುಳ್ಳ ವಾಣಿಜ್ಯ ಸಂಕೀರ್ಣವನ್ನು ಪ್ರಾಧಿಕಾರವು ನಿರ್ಮಿಸಿತ್ತು. ಆ ಬಳಿಕ 30 ಮಳಿಗೆಗಳನ್ನು ಹರಾಜು ಮೂಲಕ ವಿತರಿಸಿತ್ತು. ಬಾಕಿ ಉಳಿದಿರುವ ಮಳಿಗೆಗಳನ್ನು ಈಗ ವಿಲೇವಾರಿ ಮಾಡಲಾಗುತ್ತಿದೆ. ಪ್ರತಿ ಮಳಿಗೆಯನ್ನು 30 ವರ್ಷಕ್ಕೆ ಗುತ್ತಿಗೆ ಮಾದರಿಯಲ್ಲಿ ವಿಲೇವಾರಿ ಮಾಡಲಿದ್ದು, ಮಾರ್ಗಸೂಚಿ ದರ ಆಧರಿಸಿ ಹರಾಜು ಪ್ರಕ್ರಿಯನ್ನು ನಡೆಸಲಾಗುತ್ತದೆ.

    ಮೂರಂತಸ್ತಿನ ಕಟ್ಟಡದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಉಪ ನೋಂದಣಾಧಿಕಾರಿಯವರ ಕಚೇರಿ ಇರುವುದರಿಂದ ವ್ಯಾಪಾರ ವಹಿವಾಟಿಗೆ ಬೇಡಿಕೆ ಹೆಚ್ಚಿದೆ. ಬಾಕಿ ಉಳಿದಿರುವ ಮಳಿಗೆಗಳನ್ನು ಹರಾಜು ಮೂಲಕವೇ ವಿತರಿಸಲಾಗುವುದು. ಯಶಸ್ವಿ ಬಿಡ್‌ದಾರರಿಗೆ ಗುತ್ತಿಗೆ ನೋಂದಣಿ ಬಳಿಕ ವಹಿವಾಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts