More

    ಗಮನ ಸೆಳೆದ ತರಹೇವಾರಿ ಗಾಳಿಪಟಗಳು

    ಬೆಳಗಾವಿ: ನಗರದ ಹೊರವಲಯದ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಎರಡನೇ ದಿನವಾದ ಭಾನುವಾರವೂ ಗಮನ ಸೆಳೆಯಿತು.

    ಡ್ರ್ಯಾಗನ್ ಗಾಳಿಪಟ, ರಿಂಗ್ ಗಾಳಿಪಟ, 40 ಅಡಿಯ ಫಿಷ್ ಗಾಳಿಪಟ, ಸ್ಟಾರ್ ಗಾಳಿಪಟ ಸೇರಿದಂತೆ ಹಲವು ವಿಧದ ಗಾಳಿಪಟಗಳು ಬಾನಿನಲ್ಲಿ ಹಾರಾಡಿ ಜನರ ಚಿತ್ತಾಕರ್ಷಣೆ ಮಾಡಿದವು. ಕರ್ನಾಟಕ, ಒಡಿಶಾ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ 37 ಆಟಗಾರರು ಹಾಗೂ ಯುನೈಟೆಡ್ ಕಿಂಗಡಮ್, ಇಂಡೋನೆಷ್ಯಾ, ಸ್ಲೋವೆನಿಯಾ, ನೆದರ್‌ಲ್ಯಾಂಡ್‌ನ 6 ಮಂದಿ ಆಟಗಾರರು ಭಾಗವಹಿಸಿದ್ದರು. ಅಯೋಧ್ಯೆಯಲ್ಲಿ ನೂತನ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಮನ ಭಾವಚಿತ್ರವಿರುವ ಪತಂಗಗಳನ್ನು ಹಾರಿಸಲಾಯಿತು. ವಿವಿಧೆಡೆಯಿಂದ ಬಂದಿದ್ದ ಜನರು ಗಾಳಿಪಟ ಉತ್ಸವ ವೀಕ್ಷಿಸಿ ಖುಷಿಪಟ್ಟರು. ಉಮಂಗ್ ಯುವಜನೋತ್ಸವ ಮತ್ತಿತರ ಚಟುವಟಿಕೆ ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts