More

    ಕೊವಿಡ್​-19 ಸೋಂಕಿತ ಯುವತಿಯ ಮೇಲೆ ಒಂದೇ ರಾತ್ರಿಯಲ್ಲಿ 2 ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

    ಅಲಿಘಡ್​: ಕೊವಿಡ್​-19 ಸೋಂಕಿತಳ ಮೇಲೆ ವೈದ್ಯನೋರ್ವ ಎರಡು ಬಾರಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ. ಇಂಥದ್ದೊಂದು ನಾಚಿಕೆಗೇಡಿನ ಘಟನೆ ನಡೆದಿದ್ದು ಉತ್ತರ ಪ್ರದೇಶದ ಅಲಿಘಡ್​ ಆಸ್ಪತ್ರೆಯಲ್ಲಿ.
    28 ವರ್ಷದ ಯುವತಿಯೋರ್ವಳು ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅಲಿಘಡ್​ನಲ್ಲಿರುವ ಡಿಡಿಯು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು.

    ಕರ್ತವ್ಯದಲ್ಲಿ ಇಲ್ಲದ ವೈದ್ಯನೋರ್ವ ರಾತ್ರಿ ಎರಡು ಬಾರಿ ಆಕೆಯಿದ್ದ ವಾರ್ಡ್​​ಗೆ ಹೋಗಿ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
    ಘಟನೆಯ ಬಗ್ಗೆ ನಮಗೂ ಗೊತ್ತಾಗಿದೆ. ಯುವತಿ ನಮಗೂ ದೂರು ನೀಡಿದ್ದಾಳೆ. ಈಕೆ ಅಲಿಘಡ್​ನ ನಿವಾಸಿ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎಂದು ಡಿಡಿಯು ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಎ.ಬಿ.ಸಿಂಗ್​ ತಿಳಿಸಿದ್ದಾರೆ. ಇದನ್ನೂ ಓದಿ: 1 ರೂ.ಪಾವತಿಸಿ, ಲಿಖಿತವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕಾನೂನು ಕ್ರಮ ನಿಶ್ಚಿತ: ಸಚಿನ್​ ಪೈಲಟ್​

    ಕೊವಿಡ್​-19 ಸೋಂಕಿತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ರೇಪ್​ ಪ್ರಯತ್ನ ನಡೆದಿರುವುದು ಸತ್ಯ. ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಎಫ್​ಐಆರ್​ ದಾಖಲಾಗಿದೆ ಎಂದು ಅಲಿಘಡ್ ಜಿಲ್ಲಾಧಿಕಾರಿ ಚಂದ್ರ ಭೂಷಣ್​ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್​)

    ವಿಚ್ಛೇದಿತಳಾಗಿ ತವರಿಗೆ ಬಂದಿದ್ದ ಸೋದರಿಯನ್ನು ಬರ್ಬರವಾಗಿ ಕೊಂದ ನಾಲ್ವರು ಸೋದರರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts