More

    ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ನಂಬರ್​ ಪ್ಲೇಟ್ ಮರೆಮಾಚಿ ಪರಾರಿ!; ದಂಡ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಚಂಡರು..

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬೀಳುವವರು ಹಲವರು, ಸಂಚಾರ ನಿಯಮ ಉಲ್ಲಂಘಿಸಿಯೂ ತಪ್ಪಿಸಿಕೊಳ್ಳುವವರು ಕೆಲವರು. ಹಾಗೆ ತಪ್ಪಿಸಿಕೊಂಡರೂ ನಂಬರ್ ಗೊತ್ತಾಗಿ ದಂಡ ಬೀಳದಂತೆ ತಪ್ಪಿಸಿಕೊಳ್ಳಬೇಕು ಎಂದುಕೊಂಡು ನಂಬರ್​ ಪ್ಲೇಟ್ ಮರೆಮಾಚಿಕೊಂಡು ಪರಾರಿ ಆಗುವ ಪ್ರಚಂಡರೂ ಇವರ ಮಧ್ಯೆ ಇದ್ದಾರೆ.

    ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೂ ಅಂಥವರನ್ನು ವಾಹನದ ನೋಂದಣಿ ಸಂಖ್ಯೆ ಮೂಲಕ ಗುರುತಿಸಿ ಕೇಸು ದಾಖಲಿಸಿಕೊಂಡು ನೋಟಿಸ್​ ಕೊಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಅಂಥ ವಾಹನಗಳನ್ನು ಗುರುತಿಸಲೆಂದೇ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ, ಮಾತ್ರವಲ್ಲ ಹಲವೆಡೆ ಪೊಲೀಸರೇ ಖುದ್ದು ಕ್ಯಾಮರಾ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡು ನಂಬರ್ ನಮೂದಿಸಿ ಕೇಸು ದಾಖಲಿಸುತ್ತಿದ್ದಾರೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘಿಸುವವರು ಆ ಕ್ಷಣಕ್ಕೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡರೂ ನಂತರ ತಪ್ಪಿಗೆ ತಕ್ಕ ದಂಡದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.

    ಇದನ್ನೂ ಓದಿ: ದ್ವಿಚಕ್ರ ವಾಹನ ಸವಾರರೇ ಹುಷಾರ್!; ಬೈಕ್‌ಗಳಿಗೆ ಮಿರರ್- ಇಂಡಿಕೇಟರ್ ಲೈಟ್​ ಇಲ್ಲದಿದ್ದರೆ 500 ರೂ. ದಂಡ

    ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಸಂಚಾರ ನಿಯಮ ಉಲ್ಲಂಘಿಸುವವರು ರಂಗೋಲಿ ಕೆಳಗೆ ತೂರುವ ಪ್ರಯತ್ನ ಮಾಡುತ್ತಿದ್ದಾರೆ. ಅಂದರೆ ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ, ಅದನ್ನು ಕಂಡ ಪೊಲೀಸರು ಅಥವಾ ಸಿಸಿಟಿವಿ ಕ್ಯಾಮರಾಗೆ ನಂಬರ್ ಪ್ಲೇಟ್​ ಕಾಣಿಸಬಾರದು ಎಂದು ಅಂಥ ವಾಹನಗಳಲ್ಲಿನ ಹಿಂಬದಿ ಸವಾರರು ನಂಬರ್ ಪ್ಲೇಟ್​ ಕಾಣಿಸದಂತೆ ಮರೆಮಾಚುವಂತೆ ಮಾಡುವ ಸರ್ಕಸ್​ ಕೂಡ ಪೊಲೀಸರ/ಸಿಸಿಟಿವಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ. ದಂಡದಿಂದ ತಪ್ಪಿಸಿಕೊಳ್ಳಲು ಅಂಥ ಕೆಲವು ಕಸರತ್ತು ನಡೆಸಿರುವ ಪ್ರಚಂಡರ ಫೋಟೋಗಳು ಸಂಚಾರ ಪೊಲೀಸರ ವಲಯದಲ್ಲಿ ಈಗ ಹರಿದಾಡುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts