More

    ಮೇಲ್ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯ 60 ಅಡಿ ಎತ್ತರದಿಂದ ಖಾಸಗಿ ಬ್ಯಾಂಕ್ ಅಧಿಕಾರಿ ಪತ್ನಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
    ಪ್ರಗತಿ ನಗರದ ನಿವಾಸಿ ಒಮಿಕಾ ಮಿಶ್ರಾ (28) ಆತ್ಮಹತ್ಯೆ ಯತ್ನಿಸಿದ್ದು, ದೇಹದ ಮೂಳೆಗಳು ಭಾಗಶಃ ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಗಾಯಾಳು ಜೀವನ್ಮರಣ ಹೋರಾಟ ನಡೆಸಿದ್ದಾರೆ. ಮನೆಯಿಂದ ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವುದಾಗಿ ಹೇಳಿ ಹೊರಬಂದ ಒಮಿಕಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜಾರ್ಖಂಡ್‌ನ ಆದಿತ್ಯ ಮತ್ತು ಒಮಿಕಾ ಮಿಶ್ರಾ ಒಂದು ವರ್ಷದ ಹಿಂದೆ ವಿವಾಹವಾಗಿದ್ದು, ಪ್ರಗತಿ ನಗರದಲ್ಲಿ ದಂಪತಿ ನೆಲೆಸಿದ್ದರು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಖಾಸಗಿ ಬ್ಯಾಂಕ್‌ನಲ್ಲಿ ಆದಿತ್ಯ ಉದ್ಯೋಗದಲ್ಲಿದ್ದಾರೆ. ಇತ್ತೀಚಿಗೆ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಪ್ರತಿದಿನ ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮಾರ್ಗದಲ್ಲೇ ಒಮಿಕಾ ವಾಯು ವಿಹಾರಕ್ಕೆ ತೆರಳುತ್ತಿದ್ದರು. ಬುಧವಾರ ಬೆಳಗ್ಗೆ 7 ಗಂಟೆಗೆ ಕೂಡ ಮನೆಯಿಂದ ವಾಯು ವಿಹಾರಕ್ಕೆ ಎಂದು ಹೇಳಿ ಅವರು ಹೊರಟ್ಟಿದ್ದರು.

    ಮೇಲ್ಸೇತುವೆಗೆ ಬಂದು 2 ನಿಮಿಷಗಳು ಸೇತುವೆಯಲ್ಲಿ ನಿಂತು ದಿಢೀರನೇ ಕೆಳಗೆ ಹಾರಿದ್ದಾರೆ. ಪಾಲಕರ ಭೇಟಿಗೆ ಜಾರ್ಖಂಡ್‌ಗೆ ಹೋಗಿದ್ದ ಪತ್ನಿ ಅಲ್ಲಿಂದ 2 ದಿನಗಳ ಹಿಂದಷ್ಟೇ ಮರಳಿದ್ದಳು. ಊರಿನಿಂದ ಬಂದ ದಿನದಿಂದ ಆಕೆ ತುಂಬಾ ಬೇಸರದಲ್ಲಿದ್ದಳು. ಯಾವ ಕಾರಣಕ್ಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರಿಗೆ ಒಮಿಕಾ ಪತಿ ಆದಿತ್ಯ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts