More

    ಎಲ್ಲ ಹಳ್ಳಿಗೂ ತಲುಪಬೇಕು ಆತ್ಮನಿರ್ಭರ ಗ್ರಾಮ ಪಂಚಾಯಿತಿ ಪುಸ್ತಕ: ಮುಖ್ಯಮಂತ್ರಿ ಬೊಮ್ಮಾಯಿ

    ಬೆಂಗಳೂರು: ಗ್ರಾಮಗಳನ್ನು ಸುಸ್ಥಿರ ಹಾಗೂ ಸ್ವಯಂ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ಮಾರ್ಗದರ್ಶನ ಮಾಡುವ ’21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕವು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ತಲುಪಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

    ಲೇಖಕ ಡಾ.ಶಂಕರ ಕೆ. ಪ್ರಸಾದ್‌ ಅವರು ಪುಸ್ತಕವನ್ನು ತಮಗೆ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಶೀಘ್ರವೇ ಪುಸ್ತಕವನ್ನು ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದ ಅವರು ಪುಸ್ತಕದಲ್ಲಿ ತಿಳಿಸಲಾಗಿರುವ ತಂತ್ರಜ್ಞಾನಗಳು ರಾಜ್ಯದ ಎಲ್ಲ ಗ್ರಾಮಗಳಲ್ಲೂ ಅನುಷ್ಠಾನಕ್ಕೆ ಬರಬೇಕು ಎಂದು ಹೇಳಿದರು.

    ಇದನ್ನೂ ಓದಿ:ಕರೊನಾ ಸೋಂಕು ಪ್ರಕರಣದಲ್ಲಿ ಏರಿಕೆ; ಕೋವಿಡ್ ತಡೆಗೆ ಆರೋಗ್ಯ ಇಲಾಖೆಯಿಂದ ಪಂಚಸೂತ್ರ

    ’21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕವು ಸೀಮಾತೀತ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಹಾಗೂ ತನ್ಮೂಲಕ ಗ್ರಾಮಗಳನ್ನು ಸ್ವಯಂ ಸ್ವಾವಲಂಬಿಯಾಗುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿಗೆ ತಂತ್ರಜ್ಞಾನ ಮಾರ್ಗದರ್ಶಿಯಾಗಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಭಾರತದಾದ್ಯಂತ ಇರುವ 2,40,000 ಗ್ರಾಮ ಪಂಚಾಯಿತಿಗಳು 21ನೇ ಶತಮಾನದ ತಂತ್ರಜ್ಞಾನಗಳನ್ನು ಮತ್ತು ನಿರ್ದಿಷ್ಟವಾಗಿ ಅಂತರ್ಜಾಲವನ್ನು (ಇಂಟರ್ನೆಟ್) ಬಳಸಿಕೊಂಡು ಗ್ರಾಮ ಪಂಚಾಯಿತಿ ಉದ್ಯಮಗಳಲ್ಲಿ ದಕ್ಷತೆ, ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ತರುವ ದೂರದೃಷ್ಟಿ ಇಟ್ಟುಕೊಂಡು ಡಿಜಿಟಲ್‌ ತಾಂತ್ರಿಕತೆಯ ಪರಿಣತರಾದ ಡಾ.ಪ್ರಸಾದ್‌ ಅವರು ಸ್ಥಳೀಯ ಸರ್ಕಾರದ ವಿವಿಧ ರಂಗಗಳ ತಮ್ಮ ಎರಡು ದಶಕಗಳ ಒಡನಾಟದ ಅನುಭವದ ಆಧಾರದಲ್ಲಿ ಈ ಪುಸ್ತಕವನ್ನು ರಚಿಸಿದ್ದಾರೆ.

    ಗೋಪುರಾಕಾರ ಅಥವಾ ಪಿರಮಿಡ್‌ ವ್ಯವಸ್ಥೆಯಲ್ಲಿನ ತಳಭಾಗದಲ್ಲಿರುವ ಸ್ಥಳೀಯ ಸರ್ಕಾರಗಳನ್ನು ನಾವು ಬಲಿಷ್ಠಗೊಳಿಸಿದರೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಹಾಗೂ ರಾಜ್ಯ ಮತ್ತು ಕೇಂದ್ರ ಮಟ್ಟದವರೆಗೆ ಬಲಿಷ್ಠ ಸರ್ಕಾರಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂಬುದು ಈ ಪುಸ್ತಕದ ಲೇಖಕರ ಕಲ್ಪನೆಯಾಗಿದೆ.

    ಪ್ಯಾನ್​-ಆಧಾರ್ ಲಿಂಕ್​; ಕಡೇ ದಿನಾಂಕ ಮುಂದೂಡಲಾಗಿದ್ಯಾ?: ನಿಜಕ್ಕೂ ಕೊನೇ ದಿನ ಯಾವುದು?

    ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts