More

    ಕಸರತ್ತು ಪ್ರದರ್ಶಿಸಿದ ಪೈಲ್ವಾನರು

    ಉಪ್ಪಿನಬೆಟಗೇರಿ: ಗ್ರಾಮದ ಶ್ರೀ ಗುರು ವಿರುಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏ. 14, 15 ಹಾಗೂ 16ರಂದು ಮೂರು ದಿನಗಳವರೆಗೆ ಏರ್ಪಾಟಾಗಿದ್ದ ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಕುಸ್ತಿಪಟುಗಳು ತಮ್ಮ ಕಸರತ್ತು ಪ್ರದರ್ಶಿಸಿದರು.

    ಕೊನೇ ದಿನವಾದ ಮಂಗಳವಾರದ ಕುಸ್ತಿ ಪಂದ್ಯಕ್ಕೆ ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ಶ್ರೀ ವಿರೂಪಾಕ್ಷ ಸ್ವಾಮೀಜಿ ಚಾಲನೆ ನೀಡಿದರು. ಬೆಳಗಾವಿ, ಕಾರವಾರ, ಹಾವೇರಿ, ಧಾರವಾಡ, ಹಳಿಯಾಳ ಸೇರಿ ನಾಡಿನ ವಿವಿಧ ಭಾಗಗಳಿಂದ ಪೈಲ್ವಾನರು ಆಗಮಿಸಿದ್ದರು. ಸಿದ್ಧಾರೂಢ ಪುಡಕಲಕಟ್ಟಿ ಪ್ರಥಮ ಸ್ಥಾನ, ಕರ್ನಾಟಕ ಚಾಂಪಿಯನ್ ಬಸಪ್ಪ ಹನಸಿ ದ್ವಿತೀಯ ಸ್ಥಾನ ಹಾಗೂ ಚನ್ನಪ್ಪ ನರೇಂದ್ರ ತೃತೀಯ ಸ್ಥಾನ ಪಡೆದರು. ಉಳಿದಂತೆ ಶಿವಾನಂದ ಬೆಳಗಾವಿ, ಆಕಾಶ ಕಲಘಟಗಿ, ಕೆಂಪಣ್ಣ ಕಿತ್ತೂರ, ಅರ್ಷದ ನರೇಂದ್ರ, ಬಸವರಾಜ ಕಲಘಟಗಿ, ಬಸಪ್ಪ ಬಿಜಾಪೂರ, ರಾಕೇಶ ತಡಸಿನಕೊಪ್ಪ, ಉಮೇಶ ತಡಸಿನಕೊಪ್ಪ ಸೇರಿ ಅನೇಕ ಪೈಲ್ವಾನರು ಯಶಸ್ವಿ ಕುಸ್ತಿ ಆಡಿ ನಗದು ಬಹುಮಾನ ಪಡೆದರು.

    ಕಳೆದ ಮೂರು ದಿನಗಳಿಂದ ಏರ್ಪಾಟಾಗಿದ್ದ ಜಂಗಿ ನಿಕಾಲಿ ಕುಸ್ತಿಯಲ್ಲಿ ಸುಮಾರು 120ಕ್ಕೂ ಅಧಿಕ ಜೋಡಿ ಪೈಲ್ವಾನರು ತಮ್ಮ ಕಸರತ್ತು ಪ್ರದರ್ಶಿಸಿದರು. ಪೈಲ್ವಾನರ ಯೋಗ್ಯತೆಗೆ ಅನುಗುಣವಾಗಿ ನಗದು ಹಣ ನೀಡಲಾಯಿತು. ನಿರ್ಣಾಯಕರಾಗಿ ಗ್ರಾಮದ ಮಾಜಿ ಪೈಲ್ವಾನರಾದ ಪರಮೇಶ್ವರ ದೊಡವಾಡ, ಮಲ್ಲಪ್ಪ ಗುಡ್ಡದಮನಿ, ಅಬ್ದುಲ್ ಗಫಾರ್ ಮುಲ್ಲಾ, ಈಶ್ವರ ಮಜ್ಜಗಿ, ಆದಮಸಾಬ್ ಸೈಯ್ಯದ್, ವಿರೂಪಾಕ್ಷಪ್ಪ ದೊಡವಾಡ, ಮಡಿವಾಳಪ್ಪ ರೇಶ್ಮಿ, ಅರ್ಜುನ ಜಾಧವ, ಮಲ್ಲಯ್ಯ ಮಠಪತಿ, ಧರೆಪ್ಪ ಬೊಬ್ಬಿ, ಯಲ್ಲಪ್ಪ ತಳವಾರ, ಪ್ರಕಾಶ ಉಡಕೇರಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts