More

    ಚೀನಾ ರಾಯಭಾರ ಕಚೇರಿಗೆ 800 ಕುರಿ ನುಗ್ಗಿಸಿದ್ದ ಅಟಲ್​ ಬಿಹಾರಿ ವಾಜಪೇಯಿ!

    ನವದೆಹಲಿ: ಸದಾ ಕಾಲು ಕೆರೆದು ಜಗಳ ಮಾಡುವ ಚೀನಾಕ್ಕೆ ಪಾಠ ಕಲಿಸಲು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಒಮ್ಮೆ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಗೆ 800 ಕುರಿಗಳನ್ನು ನುಗ್ಗಿಸಿ ಪ್ರತಿಭಟಿಸಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

    ಅದು 1965. 42 ವರ್ಷದ ಅಟಲ್​ ಬಿಹಾರಿ ವಾಜಪೇಯಿ ಜನಸಂಘದಿಂದ ಸಂಸತ್​ಗೆ ಆಯ್ಕೆಯಾಗಿದ್ದರು. ಪಾಕಿಸ್ತಾನದ ನುಸುಳುಕೋರರ ಸಮಸ್ಯೆ ತಾರಕದಲ್ಲಿದ್ದ ಸಂದರ್ಭವದು. ಇದನ್ನು ತಡೆಗಟ್ಟಲು ಭಾರತ ಸರ್ಕಾರ ಹರಸಾಹಸ ಮಾಡುತ್ತಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಕಾಲು ಕೆರೆದುಕೊಂಡು ಭಾರತದ ಮೇಲೆ ಮುಗಿಬಿದ್ದು, ಆಗ ಮಹಾರಾಜರ ಆಡಳಿತಕ್ಕೆ ಒಳಪಟ್ಟಿದ್ದ ಸಿಕ್ಕಿಂ ರಾಜ್ಯವನ್ನು ತನ್ನದಾಗಿಸಿಕೊಳ್ಳಲು ಚೀನಾ ಹುನ್ನಾರ ನಡೆಸಿತ್ತು.

    ಭಾರತದ ಮೇಲೆ ದಂಡೆತ್ತಿ ಬಂದು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ನಿರ್ಧರಿಸಿದ್ದ ಚೀನಾ 1965ರ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಆಗಿನ ಪ್ರಧಾನಿ ಲಾಲ್​ಬಹಾದ್ದೂರ್​ ಶಾಸ್ತ್ರಿ ಅವರಿಗೆ ಪತ್ರವೊಂದನ್ನು ಬರೆದಿತ್ತು. ಗಡಿ ಭದ್ರತೆಯಲ್ಲಿ ತೊಡಗಿದ್ದ ಭಾರತದ ಯೋಧರು ನಮ್ಮ 800 ಕುರಿಗಳು ಮತ್ತು 59 ಯಾಕ್​ಗಳನ್ನು ಕದ್ದಿದ್ದಾರೆ. ತಕ್ಷಣವೇ ಅವನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ 1962ರಲ್ಲಿ ಮಾಡಿದಂತೆ ಸಮರ ಸಾರಿ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿತ್ತು.

    ಆದರೆ ಈ ಪತ್ರದಿಂದ ಸ್ವಲ್ಪವೂ ವಿಚಲಿತರಾಗದ ಆಗಿನ ಪ್ರಧಾನಿ ಲಾಲ್​ಬಹಾದ್ದೂರ್​ ಶಾಸ್ತ್ರಿ, ಭಾರತೀಯ ಯೋಧರು ಕುರಿಗಳನ್ನಾಗಲಿ ಅಥವಾ ಯಾಕ್​ಗಳನ್ನೇ ಆಗಲಿ ಕದ್ದಿಲ್ಲ. ಇದೊಂದು ಕಪೋಲಕಲ್ಪಿತ ಆರೋಪ ಎಂದು ಸ್ಪಷ್ಟನೆ ನೀಡಿ ಚೀನಾಕ್ಕೆ ಪತ್ರವನ್ನು ರವಾನಿಸಿದ್ದರು.
    ಈ ವಿಷಯ ತಿಳಿದ ಅಟಲ್​ ಬಿಹಾರಿ ವಾಜಪೇಯಿ, 800 ಕುರಿಗಳ ಮಂದೆಯೊಂದಿಗೆ ನವದೆಹಲಿಯಲ್ಲಿದ್ದ ಚೀನಾ ರಾಯಭಾರ ಕಚೇರಿಗೆ ತೆರಳಿದರು. ಕುರಿಗಳ ಮೇಲೆ, ‘ಬೇಕಾದರೆ ನಮ್ಮನ್ನು ತಿನ್ನಿ, ಆದರೆ ವಿಶ್ವಕ್ಕೆ ತೊಂದರೆಯುಂಟು ಮಾಡಬೇಡಿ’ ಎಂಬ ಭಿತ್ತಿಪತ್ರಗಳನ್ನು ಇರಿಸಿ ತುಂಬಾ ನಾಟಕೀಯವಾಗಿ ಪ್ರತಿಭಟನೆ ನಡೆಸಿದ್ದರು.

    ಇದನ್ನೂ ಓದಿ: ಕರೊನಾದ ಮತ್ತೊಂದು ಕರಾಳ ಮುಖ ಬಯಲು: ಬಹುಮುಖ್ಯ ಅಂಗದ ಮೇಲೆ ದಾಳಿ ಮಾಡಲಿದೆ ವೈರಸ್​!

    ರಾಜತಾಂತ್ರಿಕ ಸಿಬ್ಬಂದಿ ಮೂಲಕ ಈ ವಿಷಯ ತಿಳಿದ ಚೀನಾದ ಅಂದಿನ ಆಡಳಿತಾಧಿಕಾರಿಗಳು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಲಾಲ್​ಬಹಾದ್ದೂರ್​ ಶಾಸ್ತ್ರಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದ ಚೀನಾದ ನಾಯಕರು, ಭಾರತ ಸರ್ಕಾರದ ಕುಮ್ಮಕ್ಕಿನಿಂದಲೇ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿ, ನಮ್ಮನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಇದಕ್ಕೆ ಪ್ರತಿಯಾಗಿ ಮತ್ತೊಂದು ಪತ್ರ ಬರೆದಿದ್ದ ಲಾಲ್​ಬಹಾದ್ದೂರ್​ ಶಾಸ್ತ್ರಿ ನೇತೃತ್ವದ ಸರ್ಕಾರ, ಈ ಪ್ರತಿಭಟನೆಗೂ, ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನೀವು ಮಾಡಿರುವ ಸುಳ್ಳು ಆರೋಪ ಮತ್ತು ಕ್ಷುಲ್ಲಕ ಕಾರಣಕ್ಕೆ ದಾಳಿ ಮಾಡುವ ಬೆದರಿಕೆಗೆ ದೆಹಲಿ ನಾಗರಿಕರು ಸ್ಪಂದಿಸಿ ಮಾಡಿರುವ ಶಾಂತಿಯುತವಾಗಿ ಹಾಗೂ ತುಂಬಾ ಹಾಸ್ಯಮಯವಾಗಿ ನಡೆಸಿದ ಪ್ರತಿಭಟನೆ ಇದಾಗಿದೆ ಎಂದು ಹೇಳಿತ್ತು.

    ಆದರೂ ಈ ಕಾರಣವೂ ಸೇರಿ ಹಲವು ಮಿಥ್ಯಾರೋಪಗಳೊಂದಿಗೆ ಭಾರತದ ಮೇಲೆ 1967ರಲ್ಲಿ ಚೀನಾ ದಾಳಿ ಮಾಡಿತ್ತು. ಆದರೆ, ಈ ಬಾರಿ ಭಾರತ ಸಕಲ ರೀತಿಯಲ್ಲೂ ಸಜ್ಜಾಗಿದ್ದರಿಂದ, ಸೋತು ಸುಣ್ಣವಾದ ಚೀನಿಯರು ಅಂಡು ಸುಟ್ಟ ಬೆಕ್ಕಿನಂತೆ ಓಡಿ ಹೋಗಿದ್ದರು.

    ಗಂಡ ಹಾಗೂ ಮೂರು ಹೆಂಡತಿಯರ ಕೊಲೆ: ಸುಪಾರಿ ಹಂತಕಿಯ ರಹಸ್ಯ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts