More

    ಸೋನಾಭದ್ರಾದ ಒಬ್ರಾ ಗಣಿ ಪ್ರದೇಶ ಕುಸಿತ: ಗಣಿಯೊಳಗೆ ಸಿಲುಕಿದ್ದಾರೆ ಕಾರ್ಮಿಕರು

    ಲಖನೌ: ಚಿನ್ನದ ನಿಕ್ಷೇಪ ಇದೆ ಎಂಬ ವದಂತಿ ಹರಡಿದ ಕಾರಣ ಸುದ್ದಿಯಲ್ಲಿದ್ದ ಸೋನಾಭದ್ರಾ ಈಗ ಮತ್ತೆ ದೇಶದ ಗಮನಸೆಳೆದಿದೆ. ಇಲ್ಲಿನ ಒಬ್ರಾ ಗಣಿ ಪ್ರದೇಶ ಕುಸಿತಕ್ಕೆ ಒಳಗಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರು ಗಣಿಯೊಳಗೆ ಸಿಲುಕಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.

    ಜಿಲ್ಲಾ ಮ್ಯಾಜಿಸ್ಟ್ರೇಟ್​ ಎಸ್.ರಾಜಲಿಂಗಂ ನೀಡಿರುವ ಮಾಹಿತಿ ಪ್ರಕಾರ, ಮಾರ್ಕುಂಡಿ ಗಣಿ ಪ್ರದೇಶದಲ್ಲಿ ಶುಕ್ರವಾರ ಈ ಅನಾಹುತ ಸಂಭವಿಸಿದ್ದು, ಒಬ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಗಣಿಯೊಳಗೆ ಸಿಲುಕಿದ್ದ ಆರು ಮಂದಿಯ ಪೈಕಿ ಇಬ್ಬರನ್ನು ಹೊರ ತೆಗೆಯಲಾಗಿದೆ. ಅವರನ್ನು ರಾಜೇಂದ್ರ (32), ರಾಮಪಾಲ್ (22) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ.

    ಇನ್ನೊಬ್ಬ ಕಾರ್ಮಿಕನನ್ನು ಶನಿವಾರ ಮುಂಜಾನೆ ಹೊರತೆಗೆಯಲಾಗಿದ್ದು, ಪರಿಸ್ಥಿತಿ ಗಂಭೀರವಾದ ಕಾರಣ ವಾರಾಣಸಿಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇನ್ನೂ ಮೂವರು ಒಳಗಿದ್ದು, ಅವರನ್ನು ಹೊರ ಕರೆತರುವ ಕೆಲಸ ಪ್ರಗತಿಯಲ್ಲಿದ್ದು, ಎನ್​ಡಿಆರ್​ಫ್ ತಂಡ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಪರಿಹಾರ ಕಾರ್ಯದ ಕಡೆಗೆ ಗಮನಹರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts