More

    ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳಿ

    ಕಂಪ್ಲಿ: ಖಗೋಳದಲ್ಲಿನ ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು ಎಂದು ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಡಾ.ಬಿ.ಸುನೀಲ್ ಹೇಳಿದರು.

    ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ವಸಂತ ವಿಷುವತ್ ಸಂಕ್ರಾಂತಿ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಪ್ರಾಯೋಗಿಕ ಮಾಹಿತಿ ನೀಡಿ, ವಸಂತ ವಿಷುವತ್ ಸಂಕ್ರಾಂತಿಯನ್ನು ಸಮನಾದ ಹಗಲು ಮತ್ತು ರಾತ್ರಿ ಅರಿಯಲು ಬಳಸಲಾಗುತ್ತದೆ ಎಂದರು.

    ವಿಷುವತ್ ಸಂಕ್ರಾಂತಿಯ ಒಂದು ದಿನ ಸೂರ್ಯನ ಮಧ್ಯಭಾಗ ಭೂಮಿಯ ಪ್ರತಿ ಸ್ಥಳದ ಮೇಲಿನ ಪ್ರತಿ ಕ್ಷಿತಿಜದ ಮೇಲೆ ಮತ್ತು ಕೆಳಗೆ ಸಮನಾದ ಸಮಯವನ್ನು ವ್ಯಯಿಸುವುದರಿಂದ ಹಗಲು ಮತ್ತು ರಾತ್ರಿ ಒಂದೇ ದೀರ್ಘಾವಧಿಯದ್ದಾಗಿರುತ್ತದೆ. ಖಗೋಳದಲ್ಲಿನ ವಿದ್ಯಮಾನಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಉಪ ಪ್ರಾಚಾರ್ಯ ಟಿ.ಎಂ.ಬಸವರಾಜ್, ಶಿಕ್ಷಕಿಯರಾದ ಶಕುಂತಲಾ, ಕಮರುನ್ನಿಸಾ, ಜಯಮ್ಮ, ಸರಳಾ, ಪುಷ್ಪಲತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts