More

  ಸಂಘದ ಬಲವರ್ಧನೆಗೆ ಹೆಚ್ಚಿನ ಆದ್ಯತೆ

  ಕುಕನೂರು: ಭಾನಾಪುರ ಗ್ರಾಮದಲ್ಲಿ ಪ್ರಾರಂಭಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದು ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಹೇಳಿದರು.

  ತಾಲೂಕಿನ ಭಾನಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಗುರುವಾರ ಮಾತನಾಡಿದರು.

  ಇದನ್ನು ಓದಿ:ಸಹಕಾರ ಸಂಘದ ಅಕ್ರಮ ತನಿಖೆ ನಡೆಸುವಂತೆ ಧರಣಿ

  ಹಲವು ವರ್ಷಗಳ ಬೇಡಿಕೆಯಾಗಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸಲಾಗಿದೆ. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಬೇರೆ ಬೇರೆ ಸಹಕಾರ ಸಂಘ ಇರುವ ಗ್ರಾಮಗಳಿಗೆ ಹೋಗಿ ರಸಗೊಬ್ಬರ, ಬೀಜಗಳನ್ನು ಖರೀದಿಸಬೇಕಾಗಿತ್ತು. ಸಧ್ಯ ನಮ್ಮ ಗ್ರಾಮದಲ್ಲಿಯೇ ಸಹಕಾರ ಸಂಘ ಪ್ರಾರಂಭಿಸಿದ್ದು, ಗ್ರಾಪಂ ವ್ಯಾಪ್ತಿಯ ರೈತರಿಗೆ ಸಹಕಾರವಾಗಲಿದೆ ಎಂದರು.

  ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ: ಅಧ್ಯಕ್ಷರಾಗಿ ಚಂದ್ರಶೇಖರಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ಸಕ್ರಪ್ಪ ಜಗ್ಲಿ, ನಿರ್ದೇಶಕರಾಗಿ ಪರಶುರಾಮ ಮಡಿವಾಳರ, ನಿರ್ದೇಶಕರಾಗಿ ಕಲ್ಯಾಣಪ್ಪ ಕುಂಬಾರ, ನೀಲಮ್ಮ ಕಿನ್ನಾಳ, ವೀರಪ್ಪ ಮೈನಳ್ಳಿ, ನಿಂಗಪ್ಪ ಹೊಸಮನಿ, ಕುಮಾರ ರಮೇಶ ತಳವಾರ, ಮಲ್ಲಪ್ಪ ಸಾದರ, ರಮೇಶ, ಗಂಗಮ್ಮ ಲಕಮಾಪುರಮಠ, ಶಶಿಕಲಾ ಹಿರೇಮಠ ಆಯ್ಕೆಗೊಂಡಿದ್ದಾರೆ.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts