More

    ಸರ್ಕಾರಿ ಆಸ್ಪತ್ರೆಗೆ ವೈದ್ಯರ ನಿಯೋಜನೆ ಮಾಡಿ

    ಚಿಂಚೋಳಿ: ಚಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಚಿಂಚೋಳಿಯಲ್ಲಿ ತಾಲೂಕು ಹಿತರಕ್ಷಣಾ ಸಮಿತಿಯಿಂದ ಬುಧವಾರ ಧರಣಿ ನಡೆಸಲಾಯಿತು.

    ತಾಪಂ ಮಾಜಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ ಮಾತನಾಡಿ, ಕ್ಷೇತ್ರದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಕರ್ಯಗಳಿದ್ದರೂ ವೈದ್ಯರ ಕೊರತೆಯಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿಂದೆ ಇದ್ದ ವೈದ್ಯರನ್ನು ವರ್ಗಾವಣೆ ಮಾಡಿದ್ದಿ, ಅವರ ಬದಲಿಗೆ ಯಾರನ್ನು ನಿಯೋಜನೆ ಮಾಡಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜನಸಾಮಾನ್ಯರು ಸರಿಯಾಗಿ ಚಿಕಿತ್ಸೆ ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ಆರೋಗ್ಯ ಸೇವೆಗಾಗಿ ಬೀದರ್, ಕಲಬುರಗಿ ಹಾಗೂ ತೆಲಂಗಾಣದ ವಿವಿಧ ಸಿಟಿಗಳಲ್ಲಿನ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ, ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ಆರೋಗ್ಯಾಧಿಕಾರಿ ರಾಜಶೇಖರ ಮಾಲಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಮಹ್ಮದ್ ಗಫಾರ್ ಜತೆಗಿದ್ದರು.
    ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಪ್ರಮುಖರಾದ ಗೋಪಾಲರಾವ ಕಟ್ಟಿಮನಿ, ನೀಲಮ್ಮ, ಕೆ.ಎಂ.ಬಾರಿ, ಡಾ.ಸಂತೋಷ ಪಾಟೀಲ್, ಪ್ರೇಮಸಿಂಗ್ ಜಾಧವ್, ಶಿವಯೋಗಿ ರುಸ್ತಂಪುರ, ಸತೀಶರೆಡ್ಡಿ ತಾಜಲಾಪುರ, ಅಶೋಕ ಚವ್ಹಾಣ್, ಹಣಮಂತ ಪೂಜಾರಿ, ಉಮೇಶ ಬೇಳಕೇರಿ, ನಾಗರಾಜ ಮಲಕೂಡ, ಆಕಾಶ ಕೊಳ್ಳೂರ, ಗಿರಿರಾಜ ನಾಟೀಕಾರ, ಲೋಕೇಶ ಶೆಳ್ಳಗಿ, ಶ್ರೀನಿವಾಸ ಚಿಂಚೋಳಿಕರ, ಮೋಗಲಪ್ಪ ಕರಕಟ್ಟಿ, ಸುರೇಶ ದೇಶಪಾಂಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts