More

    3 ದಿನಕ್ಕೆ ಅಧಿವೇಶನ ಮೊಟಕು? ಸಿಎಂ ವಿರುದ್ಧ ಪ್ರತಿಪಕ್ಷಗಳು ಗರಂ

    ಬೆಂಗಳೂರು: ಮಳೆಗಾಲದ ಅಧಿವೇಶನ ಇಂದು(ಸೋಮವಾರ) ಆರಂಭವಾಗಿದ್ದು, ಕರೊನಾ ಸೋಂಕಿನ ಭೀತಿಯಲ್ಲಿ 3 ಅಥವಾ 4 ದಿನಕ್ಕೆ ಕಲಾಪ ಮೊಟಕುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಕಾಂಗ್ರೆಸ್​ ಮತ್ತು ಜೆಡಿಎಸ್​ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

    ಈ ಕುರಿತು ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರ ಬಳಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕೋವಿಡ್​ ಕಾರಣಕ್ಕೆ 50ರಿಂದ 60 ಶಾಸಕರು ಸದನಕ್ಕೆ ಬರುತ್ತಿಲ್ಲ. ಬಹುತೇಕ ಶಾಸಕರು ಹಾಗೂ ಸಚಿವರು ಕಲಾಪ ಮೊಟುಕುಗೊಳಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧಿವೇಶನ ಬೇಗ ಮುಗಿಸುವ ಬಗ್ಗೆ ವಿಪಕ್ಷ ನಾಯಕರನ್ನು ಕೋರುತ್ತೇನೆ. ಅವರು ಯಾವ ರೀತಿ ಸಹಕಾರ ಕೊಡ್ತಾರೆ ಎಂಬುದನ್ನು ನೋಡೋಣ. ಬಿಎಸಿ ಮೀಟಿಂಗ್​ನಲ್ಲಿ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿರಿ ವಿಧಾನಮಂಡಲ ಕಲಾಪ ಆರಂಭ, 60ಕ್ಕೂ ಹೆಚ್ಚು ಶಾಸಕರು ಗೈರು?

    ಕರೊನಾ ಕಾರಣ ಹೇಳಿ ಅಧಿವೇಶನ ಮೊಟಕು ಮಾಡಲು ಹೊರಟಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 3 ದಿನಕ್ಕೆ ಅಧಿವೇಶನ ಮೊಟಕು? ಸಿಎಂ ವಿರುದ್ಧ ಪ್ರತಿಪಕ್ಷಗಳು ಗರಂಕಿಡಿಕಾರಿದರು. ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಈಗ ಪಾರ್ಲಿಮೆಂಟ್ ನಡೆಸುತ್ತಿಲ್ಲವಾ? ಇದನ್ನು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅಧಿವೇಶನ ಮೊಟಕು ಮಾಡಬಾರದು. ಹಾಗೆ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಹತ್ತು ದಿನ ನಡೆಸುವುದಾಗಿ ಹೇಳಿದ್ದಾರೆ. ನಾವು ಇನ್ನೂ ಒಂದು ವಾರ ಹೆಚ್ಚಿಸಿ ಅಂತಾ ಹೇಳಿದ್ದೇವೆ. 30 ಬಿಲ್​ಗಳಿವೆ, 1600 ಪ್ರಶ್ನೆಗಳಿವೆ. ಒಂದೊಂದು ಬಿಲ್ ಚರ್ಚಿಸಲು ಕನಿಷ್ಠ ಎರಡು ಗಂಟೆಯಾದರೂ ಬೇಕು. ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ. ಇದೆಲ್ಲವನ್ನೂ ಪ್ರಸ್ತಾಪ ಮಾಡಬೇಕಿದೆ. ತಪ್ಪು ಮಾಡಿಲ್ಲ ಅಂದ್ರೆ ಅಧಿವೇಶನ ನಡೆಸಲಿ ಎಂದು ಕುಟುಕಿದರು.

    ಸಿಎಂ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರೊನಾ ಸೋಂಕು ಜಾಸ್ತಿ ಆಗ್ತಾ ಇದೆ ನಿಜ. ಹಾಗಂತ ಅಧಿವೇಶನ ಮೊಟಕುಗೊಳಿಸಲು ಒಪ್ಪಲ್ಲ. ನಾನು ಮೂರು ವಾರ ವಿಸ್ತರಿಸಿ ಎಂದಿದ್ದೆ. ಇದೀಗ ಸುಮಾರು 30ರಿಂದ 40 ಬಿಲ್ ತಂದಿದ್ದಾರೆ. ಅದನ್ನೆಲ್ಲ ವಾಪಸ್ ತೆಗೆದುಕೊಳ್ಳಲಿ ನೋಡೋಣ ಎಂದರು.

    ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​.ಡಿ.ಕುಮಾರಸ್ವಾಮಿ ಮಾತನಾಡಿ, ಕರೊನಾ ಇದ್ದರೂ ಜನಜೀವನ ನಡೆಯುತ್ತಿದೆ. ಕಲಾಪದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಅಧಿವೇಶನ ಯಾವುದೇ ಕಾರಣಕ್ಕೂ ಮೊಟಕುಗೊಳಿಸಬಾರದು, ಮುಂದುವರಿಯಬೇಕು. ಇದು ಜೆಡಿಎಸ್ ನಿಲುವು ಎಂದರು.

    ‘ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಅವರೇ ರಾಜ್ಯದ ಮುಖ್ಯಮಂತ್ರಿ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts