More

    ಮಿಲ್ಕ್​ಪಾರ್ಲರ್ ಮಾಲೀಕನಿಗೆ ಪೊಲೀಸರಿಂದ ಹಲ್ಲೆ?, ಮಾಮೂಲಿ ಕೊಡದಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ದೂರು

    ಬೆಂಗಳೂರು: ಹಾಲಿನ ಅಂಗಡಿಯನ್ನು ತೆಗೆದಿದ್ದನ್ನೇ ನೆಪ ಮಾಡಿ ಕೊಂಡು ಮಾಲೀಕನ ಮೇಲೆ ಹೆಬ್ಬಾಳ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

    ಹೆಬ್ಬಾಳ ನಿವಾಸಿ ಮಿಲ್ಕ್​ಪಾರ್ಲರ್ ಮಾಲೀಕ ರವಿಕುಮಾರ್ (45) ಇನ್​ಸ್ಪೆಕ್ಟರ್ ಮೇಲೆ ಆರೋಪ ಮಾಡಿರುವ ವ್ಯಕ್ತಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ರವಿಕುಮಾರ್ ದೂರು ಕೊಟ್ಟಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ರವಿಕುಮಾರ್ ವಿರುದ್ಧ ಜನವರಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಇದರಿಂದ ಪಾರಾಗಲೂ ಸಂಘಟನೆಯೊಂದರ ಜತೆಗೂಡಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೆಬ್ಬಾಳ ಠಾಣೆ ಇನ್​ಸ್ಪೆಕ್ಟರ್ ಅಶ್ವತ್ಥಗೌಡ ಪ್ರತಿಕ್ರಿಯಿಸಿದ್ದಾರೆ

    ಏನಿದು ಆರೋಪ?: ಹೆಬ್ಬಾಳದ ರೈಲ್ವೆ ಗೇಟ್ ಸಮೀಪ ದೂರುದಾರ ರವಿಕುಮಾರ್, ನಂದಿನಿ ಹಾಲು ಮಳಿಗೆ ಇಟ್ಟುಕೊಂಡಿದ್ದಾರೆ. ಇಲ್ಲಿ ಕೆಎಂಎಫ್​ಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಹೆಬ್ಬಾಳ ಪೊಲೀಸ್ ಠಾಣೆ ಸಿಬ್ಬಂದಿ ಬಂದು ಠಾಣೆಗೆ ಹೊಸ ಇನ್​ಸ್ಪೆಕ್ಟರ್ ಬಂದಿದ್ದಾರೆ. ಪ್ರತಿ ತಿಂಗಳು 10 ಸಾವಿರ ರೂ. ಹಫ್ತಾ ನೀಡಬೇಕೆಂದು ಸೂಚಿಸಿದ್ದರು. ಹಣ ಕೇಳಿದರೆ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದ್ದೆ. ಬಳಿಕ ಪೊಲೀಸರು ಸುಮ್ಮನಾಗಿದ್ದರು ಎಂದು ತಿಳಿಸಿದ್ದಾರೆ.

    ಮಾ.22ರಂದು ಜನತಾ ಕರ್ಫ್ಯೂಗೆ ಕರೆ ಕೊಡಲಾಗಿದ್ದು, ಅಗತ್ಯ ವಸ್ತುಗಳಾದ ಹಾಲು ಮತ್ತು ಮೊಸರು ಮಾರಾಟ ಮಾಡುತ್ತಿದ್ದೆ. ಅಂಗಡಿ ಬಳಿ ಬಂದಿದ್ದ ಹೊಯ್ಸಳ ಸಿಬ್ಬಂದಿ ಅಂಗಡಿ ಮುಚ್ಚುವಂತೆ ಹೇಳಿ ಹೋಗಿದ್ದರು. ನಾನು ಅಂಗಡಿ ಮುಚ್ಚಿರಲಿಲ್ಲ. ಇದಾದ ಕೆಲವೇ ನಿಮಿಷದಲ್ಲಿ ಮತ್ತೆ ಹೊಯ್ಸಳ ಸಿಬ್ಬಂದಿ ಅಂಗಡಿ ಬಳಿ ಬಂದು ಬಾಗಿಲು ಮುಚ್ಚು ಎಂದು ಹೇಳಿದರೆ ತೆರೆದುಕೊಂಡಿದ್ದೀಯಾ ಎಂದು ನಿಂದಿಸಿದ್ದರು. ನಾನು ಬಾಗಿಲು ಮುಚ್ಚುವುದಿಲ್ಲ. ನಾನು ಹಾಲು ಮಾರಾಟ ಮಾಡುತ್ತಿದ್ದೇನೆ ಎಂದು ಉತ್ತರಿಸಿದ್ದೆ. ಅದಕ್ಕೆ ಪೊಲೀಸರು ‘ಎಷ್ಟು ಪೊಗರು ನಿನಗೆ ಠಾಣೆಗೆ ಬಾ ಇನ್​ಸ್ಪೆಕ್ಟರ್ ಕರೆಯುತ್ತಿದ್ದಾರೆ’ ಎಂದು ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಅರ್ಧ ದಿನ ಇಟ್ಟುಕೊಂಡಿದ್ದರು. ಈ ವೇಳೆ ಅಶ್ವತ್ಥಗೌಡ ಲಾಠಿಯಿಂದ ಹಲ್ಲೆ ನಡೆಸಿದರು. ಹಲ್ಲೆ ವೇಳೆ ನನ್ನ ಸಮುದಾಯದವನ್ನು ಹೆಸರಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ರವಿಕುಮಾರ್ ದೂರು ಕೊಟ್ಟಿದ್ದಾರೆ.

    ರವಿಕುಮಾರ್ ಗುಂಪು ಕಟ್ಟಿಕೊಂಡು ಮಹಿಳೆಯರನ್ನು ರೇಗಿಸುತ್ತಿದ್ದ. ಈ ಬಗ್ಗೆ ವಿಚಾರಿಸಲು ತೆರಳಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಜನವರಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ. ರವಿಕುಮಾರ್ ಸ್ಥಳೀಯ ಪಾಲಿಕೆ ಸದಸ್ಯರೊಬ್ಬರಿಗೆ ಆಪ್ತನಾಗಿದ್ದ. ಆತನನ್ನು ಬಂಧಿಸಿದ್ದಕ್ಕೆ ರವಿಕುಮಾರ್​ನನ್ನು ಪ್ರಕರಣದಿಂದ ಬಿಟ್ಟು ಬಿಡುವಂತೆ ಆ ಸದಸ್ಯರು ಒತ್ತಡ ಹೇರಿದ್ದರು. ರವಿಕುಮಾರ್​ನನ್ನು ಬಂಧಿಸಿದ್ದಕ್ಕೆ, ಷಡ್ಯಂತ್ರ ರೂಪಿಸಿ ಸುಳ್ಳು ಆರೋಪ ಮಾಡಿಸಲಾಗಿದೆ. ರವಿಕುಮಾರ್ ವಿರುದ್ಧ ಇತರೆ ಠಾಣೆಗಳಲ್ಲೂ ಅಪರಾಧ ಪ್ರಕರಣಗಳಿವೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

    | ಅಶ್ವತ್ಥ ಗೌಡ ಹೆಬ್ಬಾಳ ಠಾಣೆ ಇನ್​ಸ್ಪೆಕ್ಟರ್

    ರಾಜಕೀಯ ನಾಯಕರ ಮಾತಿನ ಚಕಮಕಿ: ವೆಂಟಿಲೇಟರ್​ಗಾಗಿ ಮಾಧುಸ್ವಾಮಿ-ಎಚ್.ಡಿ.ರೇವಣ್ಣ ವಾಕ್ಸಮರ, ಮದ್ಯ ಮಾರಾಟ ಸಂಬಂಧ ಸಂಸದ ಪ್ರಜ್ವಲ್-ಪ್ರೀತಂ ವಾಗ್ವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts