More

    ‘ಹಿಂದು ಹೆಸ್ರಲ್ಲಿ ಫೇಸ್​ಬುಕ್​ ಅಕೌಂಟ್ ಕ್ರಿಯೇಟ್ ಮಾಡಿ, ಮದುವೆ ಆಗುವ ವಿಶ್ವಾಸ ವಂಚಕ ಮುಸ್ಲಿಂ ಹುಡುಗರ ವಿರುದ್ಧ ಕಠಿಣ ಕ್ರಮ ತಗೊಳ್ತೇವೆ’

    ಗುವಾಹಟಿ: ಲವ್ ಜಿಹಾದ್ ಚರ್ಚೆ ವ್ಯಾಪಕವಾಗಿರುವಾಗಲೇ ಈ ಬಗ್ಗೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ ಎಂಬ ಬಗ್ಗೆ ಅಸ್ಸಾಂನ ಸಚಿವ ಹಿಮಂತ ಬಿಸ್ವಾ ಶರ್ಮಾ ದಿಟ್ಟತನದ ಹೇಳಿಕೆ ನೀಡಿ ದೇಶದ ಗಮನಸೆಳೆದಿದ್ದಾರೆ. ಬಹುತೇಕ ಮುಸ್ಲಿಮ್ ಹುಡುಗರು ಯಾವ ರೀತಿಯಲ್ಲಿ ಮೋಸ, ವಂಚನೆ ಮಾಡ್ತಾರೆ ಎಂಬುದನ್ನು ಅವರು ವಿವರಿಸಿದ್ದು ಹೀಗೆ;

    “ಅನೇಕ ಮುಸ್ಲಿಮ ಹುಡುಗರು ಫೇಸ್​ಬುಕ್​ನಲ್ಲಿ ಹಿಂದು ಹೆಸ್ರಲ್ಲಿ ಅಕೌಂಟ್ ಕ್ರಿಯೇಟ್ ಮಾಡ್ತಾರೆ ಮತ್ತು ತಾವು ದೇವಸ್ಥಾನಗಳಿಗೆ ತೆರಳಿದವರಂತೆ ಫೋಟೋಸ್ ತೆಗೆದು ಆ ಖಾತೆಗಳಲ್ಲಿ ಅಪ್ಲೋಡ್ ಮಾಡ್ತಾರೆ. ಅಂತಹ ಹುಡುಗನನ್ನು ಹುಡುಗಿಯೊಬ್ಬಳು ಮದುವೆಯಾಗಿ ಸಂಸಾರ ಶುರುಮಾಡಿದಾಗ ವಾಸ್ತವದ ಅರಿವಾಗುತ್ತದೆ. ಆತನ ನಿಜ ಬಣ್ಣ ಬಯಲಾಗುತ್ತದೆ. ತಮ್ಮ ಧರ್ಮ, ಸಮುದಾಯದವನಲ್ಲ ಎಂಬುದು ಮನವರಿಕೆಯಾಗುತ್ತದೆ. ಇದು ಉತ್ತಮ ರೀತಿಯ ಮದುವೆಯಲ್ಲ. ವಿಶ್ವಾಸವಂಚನೆ ಎನ್ನುತ್ತಾರೆ ಇದಕ್ಕೆ.

    ಇದನ್ನೂ ಓದಿ: ‘ನಕಲಿ ನಕಲಿ ಎಂಬುದನ್ನು ಕೇಳಿ ಕೇಳಿ ಬಹಳ ನೊಂದುಕೊಂಡಿದ್ದೆ- ಈಗ ಕಳಂಕ ಮುಕ್ತ ನಾನು’!

    ರಾಜ್ಯ ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಡೆಯುವ ಎಲ್ಲ ಮದುವೆಗಳೂ ಮುಕ್ತವಾಗಿ ಇಚ್ಛಾಪೂರ್ವಕವಾಗಿ ಮತ್ತು ವಂಚನೆಗಳಿಲ್ಲದಂತೆ ನಡೆಯಬೇಕು ಎಂಬ ಇರಾದೆ ನಮ್ಮದು. ವಿಶ್ವಾಸ ವಂಚನೆಯಿಂದ ಮದುವೆಯಾಗುವ ಪ್ರಕರಣಗಳ ವಿರುದ್ಧ ಸರ್ಕಾರವೇ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಅಂತಹ ಪ್ರಕರಣಗಳ ವಿರುದ್ಧ ನಾವೇ ಹೋರಾಟ ನಡೆಸುತ್ತೇವೆ”. (ಏಜೆನ್ಸೀಸ್)

    ಮುನಿರತ್ನಗೆ ಕೊನೆಗೂ ಘೋಷಣೆಯಾಯ್ತು ಬಿಜೆಪಿ ಟಿಕೆಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts