More

    ಅಸ್ಸಾಂ ಪ್ರವಾಹ: ಸಂಕಷ್ಟದಲ್ಲಿವೆ 2,525 ಗ್ರಾಮಗಳು, ಮರಣ ಪ್ರಮಾಣ 89

    ಗುವಾಹಟಿ: ಅಸ್ಸಾಂನಲ್ಲಿ ಬ್ರಹ್ಮಪುತ್ರಾ ಮತ್ತು ಅದರ ಉಪನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಜುಲೈ 22ರ ತನಕ 26 ಜಿಲ್ಲೆಗಳಲ್ಲಿ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದುವರೆಗೆ 89 ಜನ ಪ್ರಾಣಕಳೆದುಕೊಂಡಿದ್ದಾರೆ ಎಂದು ಅಸ್ಸಾಂ ಸ್ಟೇಟ್ ಡಿಸಾಸ್ಟರ್ ಮ್ಯಾನೇಜ್​ಮೆಂಟ್​ ಅಥಾರಿಟಿ(ಎಎಸ್​ಡಿಎಂಎ) ತಿಳಿಸಿದೆ.

    ಎಎಸ್​ಡಿಎಂಎ ಬುಧವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಬಾರ್​ಪೇಟಾ, ದಿಬ್ರುಗಢ, ಕೋಕ್ರಜಾರ್​, ಬೊಂಗಾಯ್​ಗಾಂವ್​, ತಿನ್​ಸುಕಿಯಾ ಮತ್ತು ಇತರೆ ಜಿಲ್ಲೆಗಳಲ್ಲಿ ತೀವ್ರ ಹಾನಿ ಉಂಟಾಗಿದೆ. ಇಡೀ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ 26,31,343 ಜನರನ್ನು ಬಾಧಿಸಿದೆ. ಬ್ರಹ್ಮಪುತ್ರಾ ಮತ್ತು ಅದರ ಉಪ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಕಾರಣ 2,525 ಗ್ರಾಮಗಳು ಸಂಕಷ್ಟಕ್ಕೀಡಾಗಿವೆ. 1,15, 515.25 ಹೆಕ್ಟೇರ್ ಬೆಳೆನಾಶ ಉಂಟಾಗಿದೆ.

    ಇದನ್ನೂ ಓದಿ: ಬಿಜೆಪಿಗೆ ಸೇರಿ ಎಂದ ನೆಟ್ಟಿಗನಿಗೆ ಡ್ರೋನ್​ ಪ್ರತಾಪ್​ ನೀಡಿದ ಉತ್ತರ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬೋದು!

    ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ನೆರೆಯಿಂದಾಗಿ 120ರಷ್ಟು ಪ್ರಾಣಿಗಳು ಪ್ರಾಣ ಕಳೆದುಕೊಂಡಿದ್ದರೆ, 147 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಉದ್ಯಾನದ ಹಲವಾರು ಪ್ರಾಣಿಗಳು ರಸ್ತೆ ದಾಟಿ ಎತ್ತರದ ಪ್ರದೇಶಗಳತ್ತ ವಲಸೆ ಹೋಗಿವೆ ಎಂದು ವಿಭಾಗೀಯ ಅರಣ್ಯಾಧಿಕಾರಿಯ ವರದಿ ತಿಳಿಸಿದೆ.

    ಇದನ್ನೂ ಓದಿ: ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್​ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ

    ರಾಜ್ಯದಲ್ಲಿ ಪ್ರಸ್ತುತ 45,281 ಜನ 391 ಪರಿಹಾರಕೇಂದ್ರಗಳಲ್ಲಿ ಆಶ್ರಯಪಡೆದುಕೊಂಡಿದ್ದಾರೆ. ಸ್ಥಳೀಯರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಇದುವರೆಗೆ 452 ಜನರ ಪ್ರಾಣ ರಕ್ಷಿಸಿದೆ.

    ಇದನ್ನೂ ಓದಿ: ದುಬೆ ಎನ್‌ಕೌಂಟರ್‌ ತನಿಖೆಗೆ ಜಡ್ಜ್‌ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!

    ಕೇಂದ್ರ ಸರ್ಕಾರ ಅಸ್ಸಾಂಗೆ ಮೊದಲ ಹಂತದ ಹಣಕಾಸಿನ ನೆರವು 346 ಕೋಟಿ ರೂಪಾಯಿಯನ್ನು ಬುಧವಾರ ಘೋಷಿಸಿದ್ದು, ಕೂಡಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಸ್ಥಿತಿಗತಿಯನ್ನು ವಿವರಿಸಿದ್ದು, ಹೆಚ್ಚಿನ ನೆರವು ಕೋರಿದ್ದಾರೆ. (ಏಜೆನ್ಸೀಸ್)

    ಶಿಲುಬೆ, ಏಸುಪ್ರತಿಮೆ ಕಿತ್ತೆಸೆಯಲು ಚೀನಾದಲ್ಲಿ ಕಮ್ಯುನಿಸ್ಟರ ಒತ್ತಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts