More

    VIDEO| ನಾಗಾಲ್ಯಾಂಡ್​-ಅಸ್ಸಾಂ ಗಡಿಯಲ್ಲಿ ಕಾಂಗ್ರೆಸ್​ ಶಾಸಕನ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್​

    ಗುವಾಹಾಟಿ: ಆತಂಕಕಾರಿ ಘಟನೆಯೊಂದರಲ್ಲಿ ಗುರುವಾರ ಅಸ್ಸಾಂನ ಜೊರ್ಹಾತ್​ ಜಿಲ್ಲೆಯಲ್ಲಿನ ಡೆಸ್ಸೋಯ್​ ಕಣಿವೆ ಅರಣ್ಯದ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್​ ಶಾಸಕ ರುಪ್​ಜ್ಯೋತಿ ಕುರ್ಮಿ, ಅವರ ಭದ್ರತಾ ಅಧಿಕಾರಿಗಳು, ಪೊಲೀಸ್​ ಸಿಬ್ಬಂದಿ, ಪತ್ರಕರ್ತರು ಮತ್ತು ಇತರರ ಮೇಲೆ ಗುಂಡಿನ ದಾಳಿಯ ಪ್ರಯತ್ನ ನಡೆದಿದೆ.

    ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಗುಂಡಿನ ದಾಳಿ ನಡೆಯುತ್ತಿದ್ದಂತೆ ಕಾಂಗ್ರೆಸ್​ ಶಾಸಕರು ಮತ್ತು ಇತರರು ಅದರಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಅದೃಷ್ಟವಶಾತ್​ ದಾಳಿಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ.

    ಅಧಿಕೃತ ಮೂಲಗಳ ಪ್ರಕಾರ ಘಟನೆ ನಡೆದ ಪ್ರದೇಶವು ವಿವಾದಾತ್ಮಕ ಸ್ಥಳವಾಗಿದೆ. ಅಲ್ಲದೆ, ನಾಗಾಲ್ಯಾಂಡ್​ ಗಡಿಗೆ ಹೊಂದುಕೊಂಡಿದೆ. ಅದು ಜೋರ್ಹತ್ ಜಿಲ್ಲೆಯ ಮರಿಯಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಡೆಸ್ಸೊಯ್ ವ್ಯಾಲಿ ಮೀಸಲು ಅರಣ್ಯದ ಬೊಂಗಾಂವ್ ಮತ್ತು ಸೋನಾಪುರ ಗ್ರಾಮಗಳು ಮತ್ತು ನಾಗಾಲ್ಯಾಂಡ್‌ನ ಮೊಕೊಕ್‌ಚುಂಗ್ ಜಿಲ್ಲೆಯ ಮಾಂಗ್ಕೊಲೆಂಬಾ ವೃತ್ತದ ಅಡಿಯಲ್ಲಿರುವ ಚಾಂಗ್ಕಿ ಗ್ರಾಮಗಳ ನಡುವೆ ಬರುತ್ತದೆ.

    ಈ ಏರಿಯಾದಲ್ಲಿ ನಾಗಾಲ್ಯಾಂಡ್​ನ ಕೆಲ ಜನರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆಂಬ ಮಾಹಿತಿ ತಿಳಿದು, ಶಾಸಕರು ಮತ್ತು ಇತರರು ಸ್ಥಳಕ್ಕೆ ಭೇಟಿ ನೀಡಲು ಹೋದಾಗ ಗುಂಡಿನ ದಾಳಿ ನಡೆದಿದೆ.

    ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ಶಾಸಕ ರುಪ್​ಜ್ಯೋತಿ ಕುರ್ಮಿ, ನಾಗಾಲ್ಯಾಂಡ್​ ಜನರು ಭೂಮಿಯನ್ನು ಒತ್ತುವರಿ ಮಾಡಿ, ಮರಗಳನ್ನು ಕಡಿದು, ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಮತ್ತು ಸೋಲಾರ್ ಘಟಕಗಳನ್ನು ಅಳವಡಿಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಸ್ಥಳೀಯ ಅಸ್ಸಾಂ ಜನರು ಪೊಲೀಸ್​ ವರಿಷ್ಠಾಧಿಕಾರಿಯನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಕೇಳಿಕೊಂಡಿದ್ದರು. ಆದರೆ, ಅವರು ಭೇಟಿ ನೀಡಲಿಲ್ಲ. ಬಳಿಕ ಸ್ಥಳಕ್ಕೆ ತೆರಳಿದ ನಮ್ಮ ಮೇಲೆ ಗುಂಡಿನ ದಾಳಿಯ ಪ್ರಯತ್ನ ನಡೆಯಿತು. ನಾನಿಂದು ಹುತಾತ್ಮನಾಗಿಬಿಡುತ್ತಿದ್ದೆ. ಆದರೆ, ಅದೃಷ್ಟ ನನ್ನ ಪರವಾಗಿತ್ತು. ಹೀಗಾಗಿ ನಾನು ಬದುಕುಳಿದೆ. ಸರ್ಕಾರ ಅಸ್ಸಾಂ ಭೂಮಿಯನ್ನು ಖಂಡಿತವಾಗಿ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. (ಏಜೆನ್ಸೀಸ್​)

    ವೈರಲ್​ ಆಯ್ತು ಸುಶೀಲ್​ ಕುಮಾರ್​ ದಾಳಿಯ ವಿಡಿಯೋ: ಕುಸ್ತಿಪಟು ಮೇಲಿನ ಹಲ್ಲೆ ಹಿಂದಿನ ಉದ್ದೇಶ ಬಯಲು​

    ನೆಲದ ಕಾನೂನು ಗೌರವಿಸಿ; ಟ್ವಿಟರ್​ಗೆ ಸರ್ಕಾರದ ತಪರಾಕಿ

    ಸುಖಾಸುಮ್ಮನೆ ಮಾತನಾಡಬೇಡಿ, ದೇಶದ ಕಾನೂನು ಪಾಲಿಸಿ : ಟ್ವಿಟರ್​ಗೆ ಸರ್ಕಾರದ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts