More

    ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ ಸೇವ್ ಬರ್ಡ್ ಸೇವ್ ವಾಟರ್ ವಿನೂತನ ಕಾರ್ಯಕ್ರಮಕ್ಕೆ ಚಾಲನೆ. 

    ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ. ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಐ ಕ್ಯೂ ಎ ಸಿ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ “ಸೇವ್ ಬರ್ಡ್ ಸೇವ್ ವಾಟರ್”  ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ಅವರು ಈ ಐದು ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ

    ನೆತ್ತಿಸುಡುವ ಉರಿ, ಪಾದ ಸುಡುವಂತೆ ಕಾದ ಭೂಮಿ, ತೊಯ್ದ ಮೈ, ಧಗೆಯಿಂದ ಹೊಮ್ಮುತ್ತಿರುವ ನಿಟ್ಟುಸಿರುಗಳ ಮೂಲಕ ಬೇಸಿಗೆ ತನ್ನ ಪ್ರತಾಪವನ್ನು ಇನ್ನಿಲ್ಲದಂತೆ ತೋರಿಸುತ್ತಿದೆ. ಹನಿ ಹನಿ ನೀರಿಗಾಗಿ ಪರದಾಡುತ್ತಿರುವ, ಬೇಗೆಯಿಂದ ಬೇಯುತ್ತಿರುವ ಜೀವಗಳು ಯಾತಕ್ಕೆ ಮಳೆ ಬಾರವೋ ಶಿವ ಶಿವ ಎಂದು ಮುಗಿಲಿನತ್ತ ನೋಟ ನೆಟ್ಟಿವೆ. ಮಳೆ ಸುರಿಸಬೇಕಾದ ಮೋಡಗಳು ನಮ್ಮ ನಾಯಕರ ಹುಸಿ ಭರವಸೆಗಳಂತೆ ಕ್ಷಣ ಕಾಲ ದಟ್ಟವಾಗಿ ಕವಿದು, ಆಸೆ ಹುಟ್ಟಿಸಿ ಮರುಗಳಿಗೆಯಲ್ಲೇ ಸ್ವಹಿತದ ಬಿರುಗಾಳಿಯ ಬಿರುಸಿಗೆ ಚದುರುತ್ತಿವೆ. ಜೀವ ಉಕ್ಕಿಸುವ ನೀರಸೆಲೆ ಪಾತಾಳದತ್ತ ಮುಖಮಾಡಿದೆ. ನಿಂತ ನೆಲ ಬಿರುಕುಬಿಡುತ್ತಿದೆ. ಮೋಡದ ಎತ್ತರಕ್ಕೆ ಏರಿದ ಎಟುಕದ ಬೆಲೆಗಳಿಗೆ ಜನರ ಬದುಕು ತತ್ತರಗೊಂಡಿದೆ. ಬಿಸಿ ಜೀವಶಕ್ತಿಯನ್ನು ಉದ್ದೀಪಿಸುವಂಥದ್ದು, ಶಾಖವಿಲ್ಲದೆ ಜೀವದ ಬೆಳವಣಿಗೆ ಇಲ್ಲ. ಹೀಗೆ ಯೋಚಿಸುವಾಗ ಬೇಸಿಗೆ ಎಂದರೆ ಸಾಕು, ಕುಣಿದು ಕುಪ್ಪಳಿಸುವಂತೆ ಮಾಡುತ್ತಿದ್ದ ಬಾಲ್ಯ ಕಣ್ಣಮುಂದೆ ಬರುತ್ತದೆ.

        ಮುಂದುವರೆದು ಮಾರ್ಚ್​ ತಿಂಗಳು ಬಂತು ಅಂದರೆ ಎಲ್ಲೆಲ್ಲೂ ಬರಗಾಲದ ಛಾಯೆ. ಬಾವಿಲಿ ಹುಡುಕ್ತೀನಿ ಅಂದರು 20 ಅಡಿ ನೀರು ಸಿಗಲ್ಲ. ಹೊಳೆ-ಕೊಳ್ಳಗಳನ್ನ ಬಿಟ್ಟು ಬಿಡಿ, ಇವತ್ತಿದ್ದ ನೀರು ನಾಳೆ ಬಿಸಿಲಿಗೆ ಬತ್ತಿ ಹೋಗುತ್ತದೆ. ನಮಗೆ ಬಾಯಾರಿಕೆಯಾದಾಗ ನೀರು ಕೇಳಿ ಕುಡಿತೀವಿ. ಒಂದು ವೇಳೆ ನೀರು ಸಿಗಲಿಲ್ಲ ಅಂದರೆ, 25 ರೂಪಾಯಿ ಕೊಟ್ಟು ವಾಟರ್​ ಬಾಟಲ್​ ತಗೊಂಡು ನೀರು ಕುಡಿತೀವಿ. ಅದೇ ಆ ಮೂಕ ಪ್ರಾಣಿಗಳು ಅಮ್ಮಾ ದಣಿವಾಗಿದೆ, ಸಾಯ್ತಿದ್ದೀವಿ.. ನೀರು ಕೊಡಿ ಅಂತ ಯಾರ ಬಳಿ ತಮ್ಮ ಅಳಲನ್ನು ಹೇಳಿಕೊಳ್ಳಬೇಕು.ಇದು ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆಯ ಒಂದು ಭಾಗ. ಈಗಾಗಲೇ ಬಿಸಿಲಿನ ಬೇಗೆಯಿಂದ ಪ್ರಾಣಿ-ಪಕ್ಷಿ ಸಂಕುಲವೇ ತತ್ತರಿಸಿಹೋಗಿದೆ. ಕಾಡಿನಲ್ಲಿರುವ ಹೊಳೆ-ನದಿ-ಕೊಳ-ಗುಂಡಿಗಳೆಲ್ಲಾ ಬತ್ತಿ ಹೋಗಿ ದಾಹದಿಂದ ಪ್ರಾಣಿಗಳು ಅಲ್ಲಲ್ಲೇ ಪ್ರಾಣ ಬಿಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಬಲ್ಲರಾದ ನಾವು-ನೀವುಗಳು ಸಣ್ಣ ಅಳಿಲು ಸೇವೆ ಮಾಡೋದರಿಂದ ಬಸವಳಿದ ಪ್ರಾಣಿ-ಪಕ್ಷಿಗಳನ್ನು ಸಾವಿನ ದವಡೆಯಿಂದ ರಕ್ಷಿಸಿ, ಅವುಕ್ಕೂ ಬಾಳಿ ಬದುಕಲು ಒಂದು ಜೀವನವನ್ನು ಕಟ್ಟಿಕೊಟ್ಟಂತಾಗುತ್ತದೆ ಐದು ದಿನಗಳಲ್ಲಿ ಒಂದು ಸಾವಿರ ಮನೆಗಳಿಗೆ ಮಡಿಕೆಯ ಬೋಲ್ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು.

         ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ನಿರ್ದೇಶಕರು ಡಾ. ಶರಣು ಗೋಗೇರಿ ಅವರು ಮಾತನಾಡಿ ಮೂಕ ಪ್ರಾಣಿಗಳೆಂದು ಕರೆಸಿಕೊಳ್ಳುವ ಪ್ರಾಣಿ, ಪಕ್ಷಿಗಳಿಗೆ ಮಾನವನ ನೆರವು ಅತ್ಯಗತ್ಯ. ಬೇಸಿಗೆಗಾಲ ಬಂತೆoದರೆ ಕಾಡಿನ ಜಲಧಾರೆಗಳು ಬತ್ತುತ್ತಿದ್ದಂತೆ ಪ್ರಾಣಿ ಪಕ್ಷಿಗಳು ನೀರಿಗಾಗಿ ನಾಡಿಗಿಳಿಯುವುದು ಸಾಮಾನ್ಯ. ಪ್ರತಿವರ್ಷ ಬೇಸಿಗೆಗಾಲದಲ್ಲಿ ಕುಡಿಯುವ ನೀರು ಸಿಗದೆ ಎಷ್ಟೋ ಪ್ರಾಣಿ – ಪಕ್ಷಿಗಳು ಸಾಯುತ್ತವೆ. ಹಾಗಾದರೆ ಬೇಸಿಗೆಗಾಲದಲ್ಲಿ ನೀರಿಗಾಗಿ ಕಾಡಿನಿಂದ ನಾಡಿಗೆ ಇಳಿಯುವ ಮೂಕಪ್ರಾಣಿಗಳ ಬಾಯಾರಿಕೆಯ ದಾಹವನ್ನು ನೀಗಿಸುವುದು ಯಾರ ಕರ್ತವ್ಯ? ಅವುಗಳಿಗೆ ಅಹಾರ, ನೀರು ನೀಡುವರ‍್ಯಾರು? ಎಂಬುದನ್ನು ಪ್ರಜ್ಞಾವಂತರಾದ ನಾವು ಗಂಭೀರವಾಗಿ ಯೋಚಿಸಬೇಕಿದೆ.

    ಬೇಸಿಗೆಗಾಲದಲ್ಲಿ ನಿರಂತರವಾಗಿ ಮಣ್ಣಿನ ಪಾತ್ರೆಯೊಂದರಲ್ಲಿ ನೀರನ್ನು ತುಂಬಿಸಿ ಅದನ್ನು ಮರಗಳಿಗೆ ಹಗ್ಗದ ಮೂಲಕ ನೇತು ಹಾಕುವುದು, ಬಾಟಲಿಗಳನ್ನು ಕತ್ತರಿಸಿ ಅವುಗಳಲ್ಲಿ ನೀರು ತುಂಬಿ ಮರಕ್ಕೆ ಕಟ್ಟುವುದು, ಗೆರಟೆಗಳಲ್ಲಿ ಆಹಾರಗಳನ್ನು ಇಡುವುದು, ಮನೆಯಂಗಳದಲ್ಲಿ ಪಾತ್ರೆಗಳಲ್ಲಿ ನೀರನ್ನು ತುಂಬಿಸಿ ಇಡುವುದು, ತಾರಸಿಯಲ್ಲಿ ಪಕ್ಷಿಗಳಿಗೆ ಸುಲಭವಾಗಿ ನೀರು ಲಭ್ಯವಾಗುವಂತೆ ಟ್ರೇಗಳಲ್ಲಿ ನೀರನ್ನು ತುಂಬಿಸಿಡುವುದು, ತೋಟಗಳಲ್ಲಿ ಪಾತ್ರೆ, ತೆಂಗಿನ ಗೆರಟೆಗಳಲ್ಲಿ, ಅಂಗಡಿ ಮುಂಭಾಗಗಳಲ್ಲಿ, ನಗರಗಳ ರಸ್ತೆ ಬದಿಯಲ್ಲಿ, ಗಿಡಗಳಲ್ಲಿ ನೀರು ತುಂಬಿದ ಬಾಟಲಿಗಳನ್ನು ಇಡುವುದು ಮುಂತಾದ ಕೆಲಸಗಳನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾದಾಗ ಪ್ರತಿನಿತ್ಯ ಆಗಮಿಸುವ ಪಕ್ಷಿಗಳು ನೀರ ದಾಹದಿಂದ ಸಾಯುವ ಪ್ರಮಾಣವು ತಪ್ಪುತ್ತದೆ. ಪ್ರಾಣಿ – ಪಕ್ಷಿಗಳ ರಕ್ಷಣೆಯತ್ತ ನಾವು ತಮ್ಮ ಕೈಲಾದ ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ.

    ‘ಜಿಯೋ ಔರ್ ಜೀನೋ ದೋ’ (ಬದುಕು ಮತ್ತು ಬದುಕಗೊಡು) ಎಂಬ ಮಾತಿದೆ. ಅಂದರೆ, ‘ನಾವು ಬದುಕಬೇಕು ನಮ್ಮೊಂದಿಗೆ ಇತರ ಪ್ರಾಣಿ – ಪಕ್ಷಿ, ಕೀಟಗಳೂ ಬದುಕಬೇಕು.’ ಮನುಷ್ಯನಿಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ ಎಂದರೆ ಮನುಷ್ಯ ತನ್ನ ಸುಖವನ್ನು ತ್ಯಾಗ ಮಾಡಿ ಇನ್ನೊಬ್ಬರ ಸುಖ, ಸಂತೋಷ, ನೆಮ್ಮದಿಯನ್ನು ಬಯಸುತ್ತಾನೆ. ಅಂತಹ ಒಂದು ವಿನೂತನ ಕಾರ್ಯಕ್ರಮವನ್ನು ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಹಮ್ಮಿಕೊಂಡಿರುವುದು ಬಹಳಷ್ಟು ಒಳ್ಳೆಯ ಸಮಾಜಮುಖಿ ಕಾರ್ಯವಾಗಿದೆ ಎಂದು ಮಾತನಾಡಿದರು.

       ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ  ಪ್ರೊ.ಕೆ ಗಿರಿರಾಜ ಕುಮಾರ್, ಯುವ ನಾಯಕ ರೋಹಿತ್ ನಾಯ್ಕರ್, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಮುಖ್ಯಸ್ಥರಾದ ಪ್ರೊ. ಬಿ .ಪಿ ಜೈನರ , ಎನ್ ಎಸ್ ಎಸ್ ಕಾರ್ಯದರ್ಶಿ ಮನೋಜ್ ದಲ ಬಂಜನ್, ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಸ್ವಯಂಸೇವಕ ಸೇವಕಿಯರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts