More

    ಸೈಲಿಂಗ್‌ನಲ್ಲಿ ವಿಷ್ಣು ಸರವಣನ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹ

    ಅಡಿಲೇಡ್: ಹಾಂಗ್‌ರೆೌ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ವಿಷ್ಣು ಸರವಣನ್ ಸೈಲಿಂಗ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಸೈಲಿಂಗ್‌ನಲ್ಲಿ ಸತತ 2ನೇ ಬಾರಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಸೈಲಿಂಗ್ ಪಟು ಎನಿಸಿದ್ದಾರೆ.
    ಮುಂಬೈನಲ್ಲಿರುವ ಆರ್ಮಿ ಯಾಟಿಂಗ್ ನೋಡ್‌ನಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ 24 ವರ್ಷದ ವಿಷ್ಣು, ಐಎಲ್‌ಸಿಎ-7 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 26ನೇ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

    152 ಕ್ರೀಡಾಪಟುಗಳು ಭಾಗವಹಿಸಿದ ಸ್ಫರ್ಧೆಯಲ್ಲಿ ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ಸಿಂಗಾಪುರ, ಹಾಂಕಾಗ್ ಹಾಗೂ ಥಾಯ್ಲೆಂಡ್ ಆಟಗಾರರನ್ನು ಹಿಂದಿಕ್ಕಿದ ವಿಷ್ಣು ಏಷ್ಯಾದ ಆಟಗಾರರ ಪೈಕಿ ಮೊದಲ ಸ್ಥಾನ ಪಡೆದರು. ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 174 ಅಂಕ ಕಲೆಹಾಕಿದ ವಿಷ್ಣು, 21 ವಯೋಮಿತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಲೇಸರ್ ವಿಭಾಗದಲ್ಲಿ 20ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ವಿಷ್ಣು ಸರವಣನ್ ಅವರ ತಂದೆ ರಾಮಚಂದ್ರ ಸಹ ಸೈಲಿಂಗ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ನಿವೃತ್ತ ಸೇನಾಧಿಕಾರಿ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts