More

    ಏಷ್ಯಾದ ಪ್ರತಿಷ್ಠಿತ ಎಕ್ಸ್30 ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ 11ವರ್ಷದ ಹಮ್ಜಾ

    ಸೆಪಾಂಗ್(ಮಲೇಷ್ಯಾ) :ಏಷ್ಯಾದ ಪ್ರತಿಷ್ಠಿತ ಐಎಎಂಇ ಏಷ್ಯಾ ಸೀರೀಸ್ ಎಕ್ಸೃ್ 30 ಚಾಂಪಿಯನ್‌ಷಿಪ್‌ನ ಹೀಟ್-4ರಲ್ಲಿ ಭಾರತದ 11 ವರ್ಷದ ಕಾರ್ಟ್ ರೇಸರ್ ಹಮ್ಜಾ ಬಾಲಸಿನೊರ್‌ವಾಲಾ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದ್ದಾರೆ.

    ರೇಸ್‌ನಲ್ಲಿ ಕಲಾತ್ಮಕ ಕೌಶಲ ಪ್ರದರ್ಶಿಸಿದ ಹಮ್ಜಾ, ವೇಗ ಕಾಯ್ದುಕೊಳ್ಳುವ ಮೂಲಕ ಫ್ರಿಹುಬರ್, ಅನುಚಟ್ಕಲ್ ಹಾಗೂ ಮೆಹ್ತಾ ಅವರನ್ನು ಹಿಂದಿಕ್ಕಿ ಕೇವಲ 2 ಸೆಕೆಂಡ್‌ಗಳಲ್ಲಿ ಮೊದಲ ಸ್ಥಾನದಿಂದ ವಂಚಿತರಾಗಿ 2ನೇ ಸ್ಥಾನ ಪಡೆದರು. ಸಿಂಗಾಪುರದ ಮೈಕಲ್ ಲೆಡೆರರ್ ಮೊದಲ ಸ್ಥಾನ ಗಳಿಸಿದರು. ಫಿಲಿಪ್ಪೀನ್ಸ್‌ನ ಫ್ರಿಹುರ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.

    ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪೋಡಿಯಂ ಫಿನಿಶ್. ಈ ಸಾಧನೆ ಬಹಳ ಸಂತೋಷ ತಂದಿದೆ. ನನ್ನನ್ನು ನಿರಂತರವಾಗಿ ಬೆಂಬಲಿಸುತ್ತಿರುವ ನನ್ನ ಕುಟುಂಬ ಹಾಗೂ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹಮ್ಜಾ ಖುಷಿಯಿಂದ ಹೇಳಿದರು.

    ಹೀಟ್-1ರಲ್ಲಿ ಹಿನ್ನಡೆ ಅನುಭವಿಸಿದ ಹಮ್ಜಾಗೆ ಹಿನ್ನಡೆಗಳಿಂದ ಧೃತಿಗೆಡದೆ, ಹೀಟ್-2ನಲ್ಲಿ ಪುಟಿದೆದ್ದು ಏಷ್ಯಾದ ಹಲವು ಅನುಭವಿ ರೇಸರ್‌ಗಳನ್ನು ಹಿಂದಿಕ್ಕಿ ಆಕರ್ಷಕ ರೀತಿಯಲ್ಲಿ 4ನೇ ಸ್ಥಾನ ಪಡೆದರು. ಸಿಂಗಾಪುರದ ಆ್ಯರೊನ್ ಮೆಹ್ತಾ ಈ ಸುತ್ತು ಜಯಿಸಿದರೆ, ಥಾಯ್ಲೆಂಡ್‌ನ ಕಾಮೊಲ್ಫು ಅನುಚಟ್ಕಲ್ ಹಾಗೂ ಫ್ರಿಹುಬರ್ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

    ಪ್ರಿ-ಫೈನಲ್ಸ್‌ನಲ್ಲೂ ಛಲಬಿಡದ ಹಮ್ಜಾ, 10ನೇ ಸ್ಥಾನದಿಂದ ರೇಸ್ ಆರಂಭಿಸಿ ತಮ್ಮ ಕೌಶಲ್ಯಕ್ಕೆ ತಕ್ಕ ಪ್ರದರ್ಶನ ತೋರುವ ಮೂಲಕ 5ನೇ ಸ್ಥಾನ ಪಡೆದು ಗಮನ ಸೆಳೆದರು. ಈ ಸುತ್ತಿನಲ್ಲಿ ಜಯ ಸಾಧಿಸುವ ಮೂಲಕ ಮೆಹ್ತಾ ಸತತ 2ನೇ ಬಾರಿ ಯಶಸ್ಸು ಕಂಡರೆ, ಅನುಚಟ್ಕಲ್ ಹಾಗೂ ಫ್ರಿಹುಬರ್ ಮತ್ತೊಮ್ಮೆ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು. ಪ್ರಿ-ಫೈನಲ್‌ನಲ್ಲಿ ಯಾವ ಸ್ಥಾನದಲ್ಲಿ ರೇಸ್ ಮುಗಿಸುತ್ತಾರೆ ಎನ್ನುವ ಆಧಾರದಲ್ಲಿ ಅಂತಿಮ ಸುತ್ತಿನ ಆರಂಭಿಕ ಸ್ಥಾನಗಳು ನಿರ್ಧಾರವಾಗಲಿವೆ. ಭಾರತೀಯ ರೇಸರ್ 5ನೇ ಸ್ಥಾನದೊಂದಿಗೆ ರೇಸ್ ಆರಂಭಿಸಿದರು. ಹಮ್ಜಾ ಉತ್ತಮ ಆರಂಭ ಪಡೆದರು. .

    ರಾಯೋ ರೇಸಿಂಗ್‌ನ ಸ್ಥಾಪಕ ರಾಯೋಮಂಡ್ ಬಾನಾಜಿ ಮಾತನಾಡಿ, ಇದು ಹಮ್ಜಾ ಅವರ ಕೇವಲ 3ನೇ ಅಂತಾರಾಷ್ಟ್ರೀಯ ರೇಸ್. ಒಂದೂವರೆ ವರ್ಷದಲ್ಲಿ ಅವರು ಈ ಹಂತಕ್ಕೆ ತಲುಪಿದ್ದಾರೆ. ಹಮ್ಜಾ ಅವರಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts