More

    ಪಂಜಾಬ್​ಗೆ ಸೂರ್ಯ ಬುಮ್ರಾಘಾತ: ಗೆಲುವಿನ ಹಾದಿಗೆ ಮರಳಿದ ಮುಂಬೈ

    ವಿಶ್ವ ನಂ.1 ಟಿ20 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ (78 ರನ್​, 53 ಎಸೆತ, 7 ಬೌಂಡರಿ, 3 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ಹಾಗೂ ವೇಗಿ ಜಸ್​ಪ್ರೀತ್​ ಬುಮ್ರಾ (21ಕ್ಕೆ3) ಬಿಗಿ ಬೌಲಿಂಗ್​ ದಾಳಿಯ ನೆರವಿನಿಂದ ಐದು ಬಾರಿ ಚಾಂಪಿಯನ್​ಮುಂಬೈ ಇಂಡಿಯನ್ಸ್​ ಐಪಿಎಲ್​&17ರ ತನ್ನ 7ನೇ ಲೀಗ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಎದುರು 9 ರನ್​ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಹಾರ್ದಿಕ್​ ಪಾಂಡ್ಯ ಪಡೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದರೆ, ಸತತ 3ನೇ ಸೋಲಿಗೆ ತುತ್ತಾದ ಪಂಜಾಬ್​ 9ನೇ ಸ್ಥಾನಕ್ಕೆ ಕುಸಿಯಿತು.

    ಗುರುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಇಂಡಿಯನ್ಸ್​, ರೋಹಿತ್​ ಶರ್ಮ (36) ಹಾಗೂ ಸೂರ್ಯ ಹಾಕಿಕೊಟ್ಟ ಭದ್ರ ಅಡಿಪಾಯದ ನೆರವಿನಿಂದ 7 ವಿಕೆಟ್​ಗೆ 192 ರನ್​ಗಳ ಸವಾಲಿನ ಗುರಿ ನೀಡಿತು. ಪ್ರತಿಯಾಗಿ ಬುಮ್ರಾ (21ಕ್ಕೆ 3) ಹಾಗೂ ಕೋಟ್​ ಜೀ (32ಕ್ಕೆ 3) ದಾಳಿಗೆ ನಲುಗಿದ ಪಂಜಾಬ್​ ಕಿಂಗ್ಸ್​, ಆಶುತೋಷ್​ ಶರ್ಮ (61 ರನ್​, 28 ಎಸೆತ, 2 ಬೌಂಡರಿ, 7 ಸಿಕ್ಸರ್​) ಪ್ರತಿರೋಧದ ನಡುವೆಯೂ 19.1 ಓವರ್​ಗಳಲ್ಲಿ 183 ರನ್​ಗಳಿಗೆೆ ಸರ್ವಪತನ ಕಂಡಿತು.

    ಆಶುತೋಷ್​ ಏಕಾಂಗಿ ಹೋರಾಟ: ಸವಾಲಿನ ಮೊತ್ತದ ಚೇಸಿಂಗ್​ಗೆ ಇಳಿದ ಪಂಜಾಬ್​ ಕಿಂಗ್ಸ್​ ಆರಂಭ ಆಘಾತಕಾಯಾಗಿತ್ತು. ಪ್ರಭ್​ ಸಿಮ್ರಾನ್​ ಸಿಂಗ್​ (0) ಜತೆಯಾಗಿ ಸ್ಯಾಮ್​ ಕರನ್​ (6) ಇನಿಂಗ್ಸ್​ ಆರಂಭಿಸಿದರು. ಮೊದಲ ಓವರ್​ನಲ್ಲಿ ಕೋಟ್​ ಜೀ, ಪ್ರಭ್​ ಸಿಮ್ರಾನ್​ ವಿಕೆಟ್​ ಕಬಳಿಸಿದರು. ಮರು ಓವರ್​ನಲ್ಲಿ ರಿಲೀ ರೋಸೌ (1), ಕರನ್​ ವಿಕೆಟ್​ ಉರುಳಿಸಿದ ಬುಮ್ರಾ ಪಂಜಾಬ್​ಗೆ ಶಾಕ್​ ನೀಡಿದರು. ಲಿವಿಂಗ್​ ಸ್ಟೋನ್​ (1) ನಿರಾಸೆ ಮೂಡಿಸಿದರು. 14 ರನ್​ಗಳಿಗೆ ಅಗ್ರ 4 ವಿಕೆಟ್​ ಕಳೆದುಕೊಂಡ ಪಂಜಾಬ್​ ಚೇಸಿಂಗ್​ನಲ್ಲಿ ಪರದಾಡಿತು. ಆಗ ಶಶಾಂಕ್​ ಸಿಂಗ್​ (41) ಚೇತರಿಕೆ ನೀಡಿದರು. ಶಶಾಂಕ್​ ಜತೆಯಾದ ಅಶುತೋಷ್​ ಚೇಸಿಂಗ್​ಗೆ ಬಲ ತುಂಬಿದರು. 24 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಆಶುತೋಷ್​ ಪಂಜಾಬ್​ ಹೋರಾಟ ಜೀವಂತವಿರಿಸಿದರು. 8ನೇ ವಿಕೆಟ್​ಗೆ ಆಶುತೋಷ್​&ಹರ್​ಪ್ರೀತ್​ 32 ಎಸೆತದಲ್ಲಿ 57 ರನ್​ ಕಸಿದರು. ಆಗ ಇನಿಂಗ್ಸ್​ನ 18ನೇ ಓವರ್​ನಲ್ಲಿ ಆಶುತೋಷ್​ ವಿಕೆಟ್​ ಪಡೆದ ಕೋಟ್​ ಜೀ ಪಂಜಾಬ್​ ಹೋರಾಟ ಕೊನೆಗೊಳಿಸಿದರು. ಕೊನೇ ಓವರ್​ನಲ್ಲಿ 12 ರನ್​ ಅಗತ್ಯವಿದ್ದಾಗ ರಬಾಡ ರನೌಟ್​ ಆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts