More

  ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಶೋಕ್​ ಕಶ್ಯಪ್​ ನೇಮಕ

  ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್​ ಅವರನ್ನು ಆಯ್ಕೆ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

  ಇದನ್ನೂ ಓದಿ: ‘ಉತ್ತರಕಾಂಡ’ ಚಿತ್ರದಲ್ಲಿ ರಮ್ಯಾ? ಸ್ಯಾಂಡಲ್​ವುಡ್​ನಲ್ಲಿ ಹೀಗೊಂದು ಸುದ್ದಿ …

  ಇದಕ್ಕೂ ಮುನ್ನ ನಟ-ನಿರ್ದೇಶಕ ಸುನೀಲ್​ ಪುರಾಣಿಕ್​ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅವರ ಅವಧಿ ಪೂರ್ಣಗೊಳ್ಳುವ ಮುನ್ನವೇ ಸರ್ಕಾರವು ಅವರನ್ನು ಬದಲಿಸಿತ್ತು. ಮೂರು ತಿಂಗಳಿಂದ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಶನಿವಾರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

  ಸುನೀಲ್​ ಪುರಾಣಿಕ್​ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಶೋಕ್​ ಕಶ್ಯಪ್​ ಅವರು ಸದಸ್ಯರಾಗಿದ್ದರು. ಈಗ ಅವರೇ ಅಧ್ಯಕ್ಷರಾಗಿರುವುದು ವಿಶೇಷ. ಅಶೋಕ್​ ಕಶ್ಯಪ್​ ಅವರು ಅಕಾಡೆಮಿಯ ಆರನೇ ಅಧ್ಯಕ್ಷರಾಗಿದ್ದು, ಇದಕ್ಕೂ ಮೊದಲು ಹಿರಿಯ ನಿರ್ದೇಶಕ ಟಿ.ಎಸ್​. ನಾಗಾಭರಣ, ತಾರಾ, ರಾಜೇಂದ್ರ ಸಿಂಗ್​ ಬಾಬು, ನಾಗತಿಹಳ್ಳಿ ಚಂದ್ರಶೇಖರ್​ ಮತ್ತು ಸುನೀಲ್​ ಪುರಾಣಿಕ್​ ಅಧ್ಯಕ್ಷರಾಗಿದ್ದರು.

  ಇದನ್ನೂ ಓದಿ: ನ.18ಕ್ಕೆ ಅಮೇಜಾನ್​ ಪ್ರೈಮ್​ನಲ್ಲಿ ರಿಷಭ್​ ಶೆಟ್ಟಿ ಅಭಿನಯದ ‘ಕಾಂತಾರ’?

  ಉಪೇಂದ್ರ ನಿರ್ದೇಶನದ ‘ಶ್​’ ಚಿತ್ರದ ಮೂಲಕ ಛಾಯಾಗ್ರಾಹಕರಾದ ಅಶೋಕ್​ ಕಶ್ಯಪ್​, ‘ಹಾಲುಂಡ ತವರು’, ‘ಉಲ್ಟಾ ಪಲ್ಟಾ’, ‘ಓ ಮಲ್ಲಿಗೆ’, ‘ಮತದಾನ’, ‘ಸೂಪರ್​’, ‘ಉಪ್ಪಿ 2’ ಮುಂತಾದ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವುದರ ಜತೆಗೆ, ‘ಲಿಫ್ಟ್​ ಕೊಡ್ಲಾ’ ಉಂತಾದ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ.

  ಮುಂದಿನ ವರ್ಷ ಪ್ರಯಾಣ ಹೊರಡಲಿದ್ದಾರೆ ಪ್ರಿಯಾಂಕಾ, ಆಲಿಯಾ ಮತ್ತು ಕತ್ರಿನಾ …

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts