
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಮಾದರಿಯ ತಿಂಡಿ-ತಿನಿಸುಗಳ ವೀಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಖ್ಯಾತ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಕೋಲ್ಕತಾ ಪ್ರವಾಸದ ವೇಳೆ ರಸಗುಲ್ಲಾ ಚಾಯ್ ಸೇವಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.
ಆಶಿಶ್ ವಿದ್ಯಾರ್ಥಿ ಹಂಚಿಕೊಂಡಿರುವ ವೀಡಿಯೋದಲ್ಲಿ ಕೋಲ್ಕತಾದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ರಸಗುಲ್ಲಾ ಚಹಾ ಮಾಡುತ್ತಿರುವುದನ್ನು ಕಾಣಬಹುದು. ಚಹಾದ ರುಚಿ ಹೆಚ್ಚಾಗಲು ಶುಂಠಿ ಬಳಕೆ ಮಾಡಿದ್ದು, ಬಿಸಿ ಬಿಸಿ ಚಹಾವನ್ನು ಮಣ್ಣಿನ ಲೋಟದಲ್ಲಿ ರಸಗುಲ್ಲಾದ ಮೇಲೆ ಸುರಿಯುವುದನ್ನು ಕಾಣಬಹುದು. ಇದೀಗ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ನೀವೂ ಒಮ್ಮೆ ರಸಗುಲ್ಲಾ ಚಹಾವನ್ನು ಸವಿಯಬೇಕು ಎಂದು ಹೇಳಿಕೊಂಡಿದ್ದಾರೆ.
ಸದ್ಯ ಈ ವೀಡಿಯೋವನ್ನು 35 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ವಿವಿಧ ಮಾದರಿಯ ಕಮೆಂಟ್ ಮಾಡಿದ್ದಾರೆ.
ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಆ್ಯಂಕರ್ ಮೇಲೆ ಗುಂಡಿನ ದಾಳಿ; ಪ್ರಾಣಾಪಾಯದಿಂದ ಪಾರು
ಮದುವೆ ದಿನ ಪರೀಕ್ಷೆ ಬರೆಯಲು ಕಾರಣವೇನೆಂದು ತಿಳಿಸಿದ ವಧು; ಈಕೆಯ ಹಿಂದಿದೆ ಸ್ಫೂರ್ತಿದಾಯಕ ಕಥೆ!