More

    ಮಾತನಾಡುವ ಬದಲು ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಿ; ರಾಹುಲ್​ ಗಾಂಧಿಗೆ ಸವಾಲೆಸೆದ ಅಸಾದುದ್ದೀನ್​ ಓವೈಸಿ

    ಹೈದರಾಬಾದ್: ಸುಮನ್ನೇ ನೀವು ನನ್ನ ಬಗ್ಗೆ ಮಾತನಾಡುವ ಬದಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಯನಾಡ್​ ಬದಲು ಹೈದರಾಬಾದಿನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್​ ಓವೈಸಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಸವಾಲೆಸೆದಿದ್ದಾರೆ.

    ಹೈದಾರಾಬಾದಿನಲ್ಲಿ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಓವೈಸಿ ಕಾಂಗ್ರೆಸ್​ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಾಬ್ರಿ ಮಸೀದಿಯ ವಿಚಾರವನ್ನು ಸಹ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ.

    ಇದನ್ನೂ ಓದಿ: ನಿಂತಿದ್ದ ಲಾರಿಗೆ ಬಸ್ ಡಿಕ್ಕಿ​; ಮೋದಿ ಸಮಾವೇಶಕ್ಕೆ ತೆರಳುತ್ತಿದ್ದ 39ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯ

    ನಾನು ರಾಹುಲ್​ ಗಾಂಧಿಗೆ ನೇರ ಸವಾಲು ಹಾಕುತ್ತಿದ್ದೇನೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನೀವು ವಯನಾಡಿನ ಬದಲು ಹೈದರಾಬಾದಿನಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ. ನೀವು ದೊಡ್ಡ ದೊಡ್ಡ ಮಾತುಗಳನ್ನು ಆಡುವ ಬದಲು ಚುನಾವಣಾ ಆಖಾಡದಲ್ಲಿ ನನ್ನನ್ನು ಎದುರಿಸಿ. ನಿಮ್ಮ ಸವಾಲುಗಳನ್ನು ಸ್ವೀಕರಿಸಲು ನಾನು ಸಿದ್ದನಿದ್ದೇನೆ. ಕಾಂಗ್ರೆಸ್​ ಆಡಳಿತಾವಧಿಯಲ್ಲೇ ಅಯೋಧ್ಯೆಯಲ್ಲಿ ಬಾಬ್ರಿ ಹಾಗೂ ಸೆಕ್ರಟೆರಿಯೇಟ್ ಮಸೀದಿಯನ್ನು ಹೊಡೆದು ಹಾಕಲಾಗಿತ್ತು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್​ ಓವೈಸಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

    ಸೆಪ್ಟೆಂಬರ್ 17ರಂದು ತೆಲಂಗಾಣದ ಟುಕ್ಕುಗುಡ್ಡದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ರಾಹುಲ್​ ಗಾಂಧಿ ಬಿಆರ್​ಎಸ್​, ಬಿಜೆಪಿ ಹಾಗೂ ಎಐಎಂಎಐಎಂ ಪಕ್ಷಗಳು ಒಂದೇ ಗೂಡಿನ ಹಕ್ಕಿಗಳೆಂದು ಆರೋಪಿಸಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಹಾಗೂ ಸಂಸದ ಅಸಾದುದ್ದೀನ್​ ಓವೈಸಿ ವಿರುದ್ಧ ಇದುವರೆಗೂ ಯಾವುದೇ ಇಡಿ ಹಾಗೂ ಐಟಿ ಪ್ರಕರಣ ದಾಖಲಾಗಿಲ್ಲ. ಯಾಕೆಂದರೆ ಅವರು ಪ್ರಧಾನಿ ಮೋದಿಗೆ ಅತ್ಯಾಪ್ತರು ಎಂದು ರಾಹುಲ್​ ಗಾಂಧಿ ಆರೋಪಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts