More

    ಇಂದು ಹೈಕೋರ್ಟಲ್ಲಿ ಶಾರುಖ್​ ಪುತ್ರನ ಜಾಮೀನು ಪ್ರಕರಣ; ಮಾಜಿ ಅಟೋರ್ನಿ ಜನರಲ್​ ವಕಾಲತ್ತು

    ಮುಂಬೈ: ಮುಂಬೈನ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಬಾಲಿವುಡ್​ ನಟ ಶಾರುಖ್​ ಖಾನ್​​ ಪುತ್ರ ಆರ್ಯನ್​ ಖಾನ್​ರ ಜಾಮೀನಿಗೆ ಸಂಬಂಧಿಸಿದಂತೆ ಇಂದು ಬಾಂಬೆ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಹೈಕೋರ್ಟಿನಲ್ಲಿ ಆರ್ಯನ್​ ಪರವಾಗಿ ಭಾರತದ ಮಾಜಿ ಅಟೋರ್ನಿ ಜನರಲ್ ಮುಕುಲ್ ರೋಹಟಗಿ ವಾದ ಮಂಡಿಸಲಿದ್ದಾರೆ.

    ಸುಪ್ರೀಂ ಕೋರ್ಟ್​ನ ಹಿರಿಯ ವಕೀಲರಾಗಿರುವ ಮುಕುಲ್​ ರೋಹಟಗಿ, 2014 ರಿಂದ 2017 ರವರೆಗೆ ಭಾರತದ ಅಟೋರ್ನಿ ಜನರಲ್​ ಆಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ರೋಹಟಗಿ ಅವರು ಎನ್​ಸಿಬಿಯನ್ನು ‘ಮರಳಿನಲ್ಲಿ ತಲೆ ಹೂಳಿಕೊಂಡಿರುವ ಉಷ್ಟ್ರಪಕ್ಷಿ’ ಎಂಬುದಾಗಿ ಬಣ್ಣಿಸಿ ಟೀಕಿಸಿದ್ದು ಸುದ್ದಿಯಾಗಿತ್ತು. ಆರ್ಯನ್​ ಕೇಸಿನ ತಯಾರಿಗಾಗಿ ನಿನ್ನೆಯೇ ಮುಂಬೈ ತಲುಪಿರುವ ಅವರು, ಹೈಕೋರ್ಟ್​ನಲ್ಲಿ ಇಂದು ಆರ್ಯನ್​ ಪರ ವಕಾಲತ್ತು ನಡೆಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಸುಲಿಗೆ ಕೇಸ್​ನಲ್ಲಿ ಬಂಧಿಯಾದ ಗ್ಯಾಂಗ್​ಸ್ಟರ್​ ಗರ್ಲ್​ಫ್ರೆಂಡ್​​ ಹಿನ್ನೆಲೆ ಕೇಳಿದ್ರೆ ದಂಗಾಗ್ತೀರಾ..!

    ಈ ಮುನ್ನ ಎರಡು ಬಾರಿ ಅಂದರೆ ಮ್ಯಾಜಿಸ್ಟ್ರೇಟ್​ ಕೋರ್ಟಿನಲ್ಲಿ ಮತ್ತು ಎನ್​ಡಿಪಿಎಸ್​ ವಿಶೇಷ ನ್ಯಾಯಾಲಯದಲ್ಲಿ ಆರ್ಯನ್​ ಖಾನ್​ರ ಜಾಮೀನು ಅರ್ಜಿಗಳು ವಜಾ ಆಗಿವೆ. ಕೆಳನ್ಯಾಯಾಲಯಗಳಲ್ಲಿ ಕ್ರಿಮಿನಲ್​ ಕೇಸುಗಳ ತಜ್ಞರೆನ್ನಲಾದ ಅಮಿತ್​ ದೇಸಾಯಿ ಮತ್ತು ಸತೀಶ್​ ಮಾನೆಶಿಂಧೆ, ಆರ್ಯನ್​ ಪರ ವಕಾಲತ್ತು ವಹಿಸಿದ್ದರು. ಇದೀಗ ವಿಶೇಷ ನ್ಯಾಯಾಲಯವು ಅ.20 ರಂದು ಜಾಮೀನು ನಿರಾಕರಿಸಿ ಹೊರಡಿಸಿದ್ದ ಆದೇಶದ ವಿರುದ್ಧ ಆರ್ಯನ್​ ಪರವಾಗಿ ಸಲ್ಲಿಸಿರುವ ಅಪೀಲಿನ ವಿಚಾರಣೆ ನಡೆಯಲಿದ್ದು, ಏನು ನಿರ್ಧಾರವಾಗುತ್ತದೆ ಎಂದು ಕಾದುನೋಡಬೇಕಿದೆ. (ಏಜೆನ್ಸೀಸ್)

    ಫಾಲ್ಕೆ ಪ್ರಶಸ್ತಿ ಪಡೆದ ರಜನೀಕಾಂತ್;​ ಕರ್ನಾಟಕ ಸಾರಿಗೆ ಬಸ್​ ಚಾಲಕನ್ನನ್ನು ನೆನೆದರು!

    ಬನಿಯನ್ನಲ್ಲಿ ಬ್ಲೂಟೂತ್​ ಡಿವೈಸ್​! ಪರೀಕ್ಷೆಯಲ್ಲಿ ನಕಲು ಮಾಡಲು ಹೈಟೆಕ್​ ಮಾರ್ಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts