More

    ಅರವಿಂದ್​ ಕ್ರೇಜಿವಾಲ್​ 2, ಸಂಜಯ್ ಸಿಂಗ್ 5, ಕವಿತಾ 6: ಎಲ್ಲರೂ ತಿಹಾರ್‌ ಜೈಲು ಪಾಲು!

    ನವದೆಹಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಇಂದು (ಸೋಮವಾರ) ರೂಸ್ ಅವೆನ್ಯೂ ಕೋರ್ಟ್ ಬಂಧನದ ಅವಧಿ ವಿಸ್ತರಿಸಿದ ನಂತರ, ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಗಿದೆ.

    ಇದನ್ನೂ ಓದಿ: ಐಪಿಎಲ್ ನಕಲಿ ಟಿಕೆಟ್ ಮಾರಾಟ ಜಾಲ ಪತ್ತೆ: ಏಳು ಜನರ ಬಂಧನ 

    ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸುವ ಮೊದಲು ಅವರ ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಸಚಿವರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರನ್ನು ಭೇಟಿ ಮಾಡಲು ರೂಸ್ ಅವೆನ್ಯೂ ಕೋರ್ಟ್ ಅವಕಾಶ ನೀಡಿದೆ.

    ಇಡಿ ಕೇಜ್ರಿವಾಲ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಿ ಹದಿನೈದು ದಿನಗಳ ನ್ಯಾಯಾಂಗ ಬಂಧನಕ್ಕೆ ಕೇಳಿತ್ತು. ಕೇಜ್ರಿವಾಲ್ ಅವರು ಒಂಬತ್ತು ಕೇಂದ್ರೀಯ ಸಂಸ್ಥೆಯ ಸಮನ್ಸ್‌ಗಳನ್ನು ಉಲ್ಲಂಘಿಸಿದ ನಂತರ ದಿಲ್ಲಿ ಮದ್ಯ ನೀತಿ ಹಗರಣದಲ್ಲಿ ಮಾರ್ಚ್ 21 ರಂದು ಬಂಧಿಸಿದ್ದರು. ಅಂದಿನಿಂದ ಇಡಿ ಲಾಕ್‌ಅಪ್‌ನಿಂದ ಅವರು ಸರ್ಕಾರವನ್ನು ನಡೆಸುತ್ತಿದ್ದಾರೆ.

    ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ಕರೆತರಲಾಯಿತು. ಅವರನ್ನು ಜೈಲು ಸಂಖ್ಯೆ 2 ರಲ್ಲಿ ಇರಿಸಲಾಗುವುದು. ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಕರೆದೊಯ್ಯಲಾಯಿತು. ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗುವುದು” ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದೇ ಪ್ರಕರಣದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿತರಾಗಿದ್ದ ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ಈ ಹಿಂದೆ ಜೈಲು ಸಂಖ್ಯೆ 2 ರಲ್ಲಿ ಇರಿಸಲಾಗಿತ್ತು. ಆದರೆ ಇತ್ತೀಚೆಗೆ ಜೈಲು ಸಂಖ್ಯೆ 5 ಕ್ಕೆ ಸ್ಥಳಾಂತರಿಸಲಾಯಿತು. ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರು ಮಹಿಳಾ ಜೈಲಿನ ಜೈಲು ಸಂಖ್ಯೆ 6 ರಲ್ಲಿದ್ದಾರೆ.

    ಆಸ್ಪತ್ರೆಗೆ ದಾಖಲಾದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts