More

    ಕೃತಕ ಬುದ್ಧಿಮತ್ತೆಯಿಮದ ಬಿಕ್ಕಟ್ಟಿನ ಸಂದರ್ಭ ಪರಿಹಾರ

    ರಾಯಚೂರು: ಕೃತಕ ಬುದ್ಧಿಮತ್ತೆ ಯಂತ್ರಗಳ ಮೂಲಕ ಮಾನವನ ಬುದ್ದಿವಂತಿಕೆಯ ಅನುಕರಣೆಯಾಗಿದ್ದು, ನಾವೀನ್ಯತೆಯ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ. ಇದು ಸವಾಲುಗಳು ಮತ್ತು ಬಿಕ್ಕಟ್ಟಿನ ಸಂದರ್ಭಗಳನ್ನು ಪರಿಹರಿಸುತ್ತದೆ ಎಂದು ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ.ಹರೀಶಕುಮಾರ ಸರ್ದಾನಾ ಹೇಳಿದರು.
    ಸ್ಥಳೀಯ ರಾಯಚೂರು ವಿವಿಯಲ್ಲಿ ಕಾರ್ಡ್ಿ ಮೆಟ್ರೋಪೊಲಿಟಿಯನ್ ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕೃತಕ ಬುದ್ದಿಮತ್ತೆ ಕುರಿತು ಐದು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಂಗಳವಾರ ಮಾತನಾಡಿ, ಕೃತಕ ಬುದ್ಧಿಮತ್ತೆ ಮಾನವರು ಮತ್ತು ಪ್ರಾಣಿಗಳ ನೈಸರ್ಗಿಕ ಬುದ್ಧಿವಂತಿಕೆಗೆ ವಿರುದ್ಧವಾಗಿದೆ ಎಂದರು.
    ಕೃತಕ ಬುದ್ಧಿಮತ್ತೆ ಯಂತ್ರಗಳ ಬುದ್ಧಿವಂತಿಕೆಯನ್ನು ಸೂಚಿಸುತ್ತಿದ್ದು, ಯಂತ್ರಗಳ ಕಲಿಕೆ, ಯೋಜನೆ, ತಾರ್ಕಿಕ ಮತ್ತು ಸಮಸ್ಯೆ ಪರಿಸುವಂತಹ ಕಾರ್ಯಗಳನ್ನು ನಿರ್ವಹಿಸುತ್ತವೆ. ಇದಕ್ಕೆ ಸಂಬಂಸಿದಂತೆ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ ಎಂದು ಹೇಳಿದರು.
    ಕಾರ್ಡ್ಿ ಮೆಟ್ರೋಪಾಲಿಟಿಯನ್ ವಿವಿಯ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ಡಾ.ಸಂದೀಪ್ ಸಿಂಗ್ ಮಾತನಾಡಿ, ಕೃತಕ ಬುದ್ಧಿಮತ್ತೆ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನೈಜ ಪ್ರಪಂಚದ ದೃಶ್ಯ ಕಾರ್ಯಗಳನ್ನು ಪರಿಹರಿಸುವಲ್ಲಿ ಮಾನವರನ್ನು ಮೀರಿಸುತ್ತದೆ. ಮಾನವನ ಜೀವನದ ಮೇಲೆ ತಂತ್ರಜ್ಞಾನದ ಪ್ರಭಾವ ಕುರಿತು ಚರ್ಚೆ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಕಲಿಕೆ ಅನಿವಾರ್ಯವಾಗಿದೆ. ಹಿಂದುಳಿದ ಹಣೆಪಟ್ಟಿಯಿಂದ ಹೊರಬಂದು ನಾವು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇವೆ ಎನ್ನುವುದನ್ನು ತೋರಿಸಬೇಕಾಗಿದೆ ಎಂದು ಹೇಳಿದರು.
    ಪ್ರಾಧ್ಯಾಪಕರಾದ ಡಾ.ಫಿಯೋನಾ ಕ್ಯಾರೋಲ್, ಪ್ರೊ.ಸಿ.ಎಸ್.ಪಾರ್ವತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿ ವೌಲ್ಯಮಾಪನ ಕುಲಸಚಿವ ಪ್ರೊ.ಯರ‌್ರಿಸ್ವಾಮಿ, ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ.ರವಿಕುಮಾರ, ಡಾ.ಚಂದ್ರಶೇಖರ ಸಜ್ಜನ್, ಪ್ರೊ.ಪಿ.ಭಾಸ್ಕರ್, ಅನಿಲ್ ಅಪ್ರಾಳ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts