More

    ಹಣಕೊಡು ಇಲ್ಲದಿದ್ದರೆ ನಿನ್ನ ಖಾಸಗಿ ವಿಡಿಯೋವನ್ನು ವೈರಲ್​ ಮಾಡುತ್ತೇನೆ ಎಂದು ಸ್ನೇಹಿತೆಗೆ ಬೆದರಿಕೆ ಹಾಕುತ್ತಿದ್ದವ ಬಂಧನ

    ಬೆಂಗಳೂರು: ಸ್ನೇಹಿತೆಯ ಖಾಸಗಿ ವಿಡಿಯೋವನ್ನಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದೀಪಕ್​ ಸೇರ್​ಕರ್​ ಬಂಧಿತ. ತನ್ನ ಸ್ನೇಹಿತೆ ಸ್ನಾನ ಮಾಡುವ ದೃಶ್ಯವನ್ನು ಅದು ಹೇಗೋ ಸೆರೆಹಿಡಿದು ಇಟ್ಟುಕೊಂಡಿದ್ದ. ಅದನ್ನು​ ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಹಣ ನೀಡದೆ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ವಿಡಿಯೋವನ್ನು ಯುವತಿಗೆ ಮೇಲ್​ ಮಾಡಿದ್ದ. 3 ಲಕ್ಷ ರೂಪಾಯಿ ನೀಡಬೇಕು ಇಲ್ಲದಿದ್ದರೆ ವೈರಲ್​ ಮಾಡುತ್ತೇನೆ ಎಂದು ಹೆದರಿಸಿದ್ದ.

    ಅಷ್ಟು ಮಾಡಿದ ಬಳಿಕ ತನ್ನ ಸ್ವಗ್ರಾಮವಾದ ಮಧ್ಯಪ್ರದೇಶದ ಬೆತುಲ್​ಗೆ ಹೋಗಿ ತಲೆಮರೆಸಿಕೊಂಡಿದ್ದ. ​ಆತನ ಬ್ಲ್ಯಾಕ್​ಮೇಲ್​ಗೆ ಹೆದರಿದ್ದ ಯುವತಿ ಕೆ.ಆರ್​.ಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ವಿಶೇಷ ತನಿಖಾ ದಳ ರಚಿಸಿ ಬೆತುಲ್​ನಲ್ಲಿಯೇ ದೀಪಕ್​ನನ್ನು ಬಂಧಿಸಿದ್ದಾರೆ. ಮೊಬೈಲ್​ನ್ನು ವಶಪಡಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts