More

  ವ್ಯಾಪಾರಿಗೆ ಮೋಸ ಮಾಡಿದ್ದ ವಂಚಕನ ಸೆರೆ

  ಗುತ್ತಲ: 200 ರೂಪಾಯಿ ಬದಲಿಗೆ 500ರ ಮುಖ ಬೆಲೆಯ ನೋಟುಗಳನ್ನು ನೀಡು ವುದಾಗಿ ಹಾಗೂ ಒಣ ಮೆಣಸಿನಕಾಯಿ ಬೇಕೆಂದು ವ್ಯಾಪಾರಿಗೆ 53 ಸಾವಿರ ರೂಪಾಯಿ ಹಾಗೂ 8 ಕೆಜಿ ಒಣ ಮೆಣಸಿನಕಾಯಿಯೊಂದಿಗೆ ಪರಾರಿಯಾಗಿದ್ದ ವಂಚಕನನ್ನು ಗುತ್ತಲ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರ ತಾಲೂಕಿನ ತುಲಹಳ್ಳಿ ಗ್ರಾಮದ (ದಾವಣಗೆರೆ ನಗರದ ಶ್ಯಾಮನೂರಿನ ಜೆ.ಎಚ್. ಪಟೇಲ ಬಡಾವಣೆಯಲ್ಲಿ ಹಾಲಿ ವಸತಿ) ಶಿವಕುಮಾರ ಚಂದ್ರಪ್ಪ ಚಳ್ಳಿ ಬಂಧಿತ ಆರೋಪಿ. ಕೂರಗುಂದ ಗ್ರಾಮದ ಒಣಮೆಣಸಿನಕಾಯಿ ವ್ಯಾಪಾರಿ ಸಿದ್ದಪ್ಪ ತೋಟಪ್ಪ ದಿಳ್ಳೆಣ್ಣನವರ (ಬಡಲಿಂಗಣ್ಣನವರ) ಮನೆಯಲ್ಲಿ ಕಳೆದ ಶನಿವಾರ ಮೆಣಸಿನಕಾಯಿ ಖರೀದಿ ಹಾಗೂ 200 ರೂ. ಬದಲಾಗಿ 500 ರ ಮುಖಬೆಲೆಯ ನೋಟುಗಳನ್ನು ನೀಡುವುದಾಗಿ ನಂಬಿಸಿದ್ದ. ನಂತರ ಸಿದ್ದಪ್ಪನಿಂದ 53 ಸಾವಿರ ರೂ.ಗಳನ್ನು ಪಡೆದುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದ. ಗುತ್ತಲ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶುಕ್ರವಾರ ವಂಚಕ ಶಿವಕುಮಾರ ಚಳ್ಳಿ ಎಂಬುವವನನ್ನು ಬಂಧಿಸಿ, 50 ಸಾವಿರ ರೂ.ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts