More

    ಬೈಕ್-ಮೊಬೈಲ್ ಕಳ್ಳರ ಸೆರೆ

    ವಿಜಯಪುರ: ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ಅಂದಾಜು 15. 60 ಲಕ್ಷ ರೂ.ಮೌಲ್ಯದ 26 ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದರು.

    ಯೋಗಾಪುರ ಕಾಲನಿಯ ನಿವಾಸಿ ಸುನೀಲ ಭೀಮಪ್ಪ ಗಡ್ಡಿ, ಕೆಎಚ್‌ಬಿ ಕಾಲನಿ ನಿವಾಸಿ ಮೊಶೀನ ಬಾಬುಲಾಲ ಕಲಾದಗಿ ಹಾಗೂ ಸದ್ದಾಂ ಮುನ್ನಾ ಮುತವಲ್ಲಿ ಬಂಧಿತ ಆರೋಪಿಗಳು. ಇವರಿಂದ ಮೋಟರ್‌ಸೈಕಲ್ ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣ ಜೊತೆಯಲ್ಲಿಯೇ ಮೊಬೈಲ್ ಕಳ್ಳತನ ಪ್ರಕರಣ ಸಹ ಪತ್ತೆ ಹಚ್ಚಿ 2.90 ಲಕ್ಷ ರೂ.ಮೌಲ್ಯದ 29 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಇತ್ತೀಚೆಗೆ ನಗರದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿರುವುದು ಕಂಡು ಬಂತು. ಹೀಗಾಗಿ ಪಿಐ ಮಹಾಂತೇಶ ಧಾಮಣ್ಣವರ, ಪಿಎಸ್‌ಐ ಎಸ್.ಕೆ. ಮನ್ನಿಕೇರಿ, ಎಸ್.ಬಿ. ಖೋತ, ಆರ್.ಕೆ. ಗವಾರ, ಸಿಬ್ಬಂದಿ ಶಿವಾನಂದ ಅಳ್ಳಿಗಿಡದ, ಬಾಬು ಕೆ.ಗುಡಿಮನಿ, ಎಚ್.ಎಚ್. ಜಮಾದಾರ, ಅನೀಲ ದೊಡ್ಡಮನಿ, ಆರ್.ವಿ. ನಾಯಕ, ಆಸೀಫ್ ರಿಸಾಲ್ದಾರ್, ಬಶೀರ್‌ಅಹ್ಮದ್ ಶೇಖ, ಚಿದಾನಂದ ಗಿಡಗಿಂಚಿ, ರಾಮನಗೌಡ ಬಿರಾದಾರ, ಬಿ.ಎಂ. ಹಡಲಗೇರಿ, ವಿನಾಯಕ ಕಡ್ಲಿಬಾಳು, ಸುಧೀರ ಗದ್ಯಾಳ, ಮಾಯಪ್ಪ ಟೋಪಣಗೋಳ, ರವಿಕಿರಣ ಗುತ್ತರಗಿ, ಕುಮಾರ ರಾಠೋಡ, ಸುನೀಲ ಮೂಳೆ, ಸುನೀಲ ಗೌಳಿ ಮತ್ತಿತರರನ್ನು ಒಳಗೊಂಡ ತಂಡ ರಚಿಸಲಾಗಿತ್ತು.

    ಚುರುಕಿನ ಕಾರ್ಯಾಚರಣೆ ನಡೆಸಿದ ತಂಡ ಪ್ರಕರಣ ಪತ್ತೆ ಹಚ್ಚುವಲ್ಲಿ ಸಫಲವಾಗಿದ್ದು ಸೂಕ್ತ ಬಹುಮಾನ ಘೋಷಿಸುವುದಾಗಿ ತಿಳಿಸಿದರು.
    ಎಎಸ್‌ಪಿ ಶಂಕರ ಮಾರಿಹಾಳ, ಡಿವೈಎಸ್‌ಪಿ ಬಸವರಾಜ ಎಲಿಗಾರ, ಪಿಐ ಮಹಾಂತೇಶ ಧಾಮಣ್ಣವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts