More

    ಬಾಕಿ ವೇತನ ನೀಡಲು ಆಗ್ರಹ

    ಗೋಕಾಕ: 6 ತಿಂಗಳಿನಿಂದ ನಗರದ ಸರ್ಕಾರಿ ಆಸ್ಪತ್ರೆಯ ಹೊರ ಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗಿಲ್ಲ. ಆದ್ದರಿಂದ ಶೀಘ್ರ ವೇತನ ನೀಡಬೇಕು ಎಂದು ಒತ್ತಾಯಿಸಿ ಆಸ್ಪತ್ರೆಯ ಹೊರ ಗುತ್ತಿಗೆ ಮತ್ತು ಡಿ.ಗ್ರೂಪ್ ನೌಕರರು ಸೋಮವಾರ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಆಸ್ಪತ್ರೆಯಲ್ಲಿ 40ಕ್ಕೂ ಹೆಚ್ಚು ಜನರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಓರ್ವ ಗುತ್ತಿಗೆ ನೌಕರನಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಈತನು ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಸ್ಪತ್ರೆಯ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾನೆ ಎನ್ನಲಾಗಿದೆ.

    ಈ ಕುರಿತು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ ಅವರನ್ನು ಸಂರ್ಪಕಿಸಿದಾಗ, ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಎಲ್ಲ ನೌಕರರಿಗೆ 3 ತಿಂಗಳ ವೇತನ ಬಾಕಿ ಇದೆ. ಈಗಾಗಲೆ 1 ತಿಂಗಳ ವೇತನ ಪಾವತಿಸಲು ಕ್ರಮ ಜರುಗಿಸಲಾಗಿದೆ. ಬಾಕಿ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಕರೊನಾ ಪಾಸಿಟಿವ್ ವರದಿ ಬಂದ ಗುತ್ತಿಗೆ ನೌಕರ ಗುಣಮುಖ ಹೊಂದಿದ್ದ ಕಾರಣ ಅವನನ್ನು ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಈತ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ. ಈತನಿಗೆ ವಾಸ ಮಾಡಲು ಆಸ್ಪತ್ರೆಯ ಮೇಲ್ಭಾಗದಲ್ಲಿ ಒಂದು ಕೊಠಡಿಯನ್ನು ನೀಡಲಾಗಿತ್ತು. ಅವನ ಮನೆ ಸುತ್ತಮುತ್ತ ಸೀಲ್‌ಡೌನ್ ಮಾಡಲು ತೆರಳಿದ್ದ ನಗರಸಭೆ ಸಿಬ್ಬಂದಿಯೊಬ್ಬರಿಗೆ ಪೋನ್ ಮಾಡಿ ‘ನಮ್ಮ ವೇತನ ಆಗಿಲ್ಲ, ನೀವು ಸೀಲ್‌ಡೌನ್ ಮಾಡಿದರೆ ನಾನು ಆಸ್ಪತ್ರೆಯ ಮೇಲಿನಿಂದ ಜಿಗಿಯುವುದಾಗಿ’ ಬೆದರಿಕೆ ಹಾಕಿದ್ದಾನೆ ಎಂದು ಸೃಷ್ಟಪಡಿಸಿದರು.

    ಬಸವರಾಜ ದಾಸನಾಳ, ಮಹಾಲಿಂಗ ಹೊಸಮನಿ, ಲಕ್ಕಪ್ಪ ಡೋಣಿ, ಲಕ್ಷ್ಮೀ ತಳವಾರ, ಲಕ್ಕವ್ವ ಧಾರವಾಡಿ ಸೇರಿ ಇತರು ಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts