More

    27 ಸಾವಿರ ಕ್ಯಾಬ್ ಡ್ರೈವರ್​​ಗಳಿಗೆ ರಾಜ್ಯ ಸರ್ಕಾರದ ಪರಿಹಾರ ಧನ

    ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ತೀವ್ರ ಹಾನಿ ಅನುಭವಿಸಿದ ಆಟೋ ಮತ್ತು ಟ್ಯಾಕ್ಸಿ ಡ್ರೈವರ್‌ಗಳ ಪೈಕಿ 27,000 ಕ್ಕೂ ಹೆಚ್ಚು ಜನರಿಗೆ ಒನ್ ಟೈಮ್ ಪೇಮೆಂಟ್ ಆಗಿ ರಾಜ್ಯ ಸರ್ಕಾರ 5,000 ರೂ.ಪರಿಹಾರ ಒದಗಿಸಿದೆ.
    ಈ ಕುರಿತು ಮಾತನಾಡಿದ ಆದರ್ಶ ಆಟೋ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಸಂಪತ್, ಸರ್ಕಾರ ನೀಡಿದ ಈ ಪರಿಹಾರಧನದಿಂದ ಸ್ವಲ್ಪ ನಿರಾಳವಾಗಿದೆಯಾದರೂ ಬ್ಯಾಡ್ಜ್‌ಗಳನ್ನು ಹೊಂದಿರದ ಚಾಲಕರಿಗೆ ಪರಿಹಾರ ಕೋರಿ ಸಿಎಂ ಯಡಿಯೂರಪ್ಪ ಅವರನ್ನು ಸಂಪರ್ಕಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
    ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಬ್ಯಾಡ್ಜ್‌ಗಳಿಲ್ಲದ ಚಾಲಕರು ಇದ್ದಾರೆ. ನಾವು ಅವರಿಗೆ ಸಹಾಯ ಕೋರಿ ಶುಕ್ರವಾರ ಮನವಿ ಪತ್ರ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಅಂದಾಜು 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿದ್ದು, ತಲಾ 5,000 ರೂ.ಗಳ ಪರಿಹಾರವನ್ನು (ಒನ್ ಟೈಮ್ ಕಾಂಪೆನ್ಷೇಷನ್) ನೀಡುವುದಾಗಿ ಸಿಎಂ ಕಳೆದ ವಾರ ಘೋಷಿಸಿದ್ದರು. ಸಾರಿಗೆ ಇಲಾಖೆಯ ಪ್ರಕಾರ, ಪರಿಹಾರಕ್ಕಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ 2 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
    ರಾಜ್ಯದ 40,000 ಚಾಲಕರಿಗೆ ಪರಿಹಾರ ನೀಡಲು ನಾವು 20 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಒಟ್ಟು 2 ಲಕ್ಷ ಅರ್ಜಿದಾರರಿಗೆ ಪರಿಹಾರ ನೀಡಲು ನಮಗೆ ಇನ್ನೂ ಅಂದಾಜು 80 ಕೋಟಿ ರೂ. ಬೇಕಾಗುತ್ತದೆ. ಸದ್ಯ ನಾವು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ರಾಜ್ಯ ಸರ್ಕಾರದ ಸಹಾಯದ ಅಗತ್ಯವಿದೆ ”ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಹೇಮಂತ್ ಕುಮಾರ್ ತಿಳಿಸಿದ್ದಾರೆ.

    12 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಮ್ಮ ಸಮೀಪದಲ್ಲೇ ಪರೀಕ್ಷೆ ಕೇಂದ್ರ ಹಂಚಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts