More

    ಕ್ಯಾನ್ಸರ್​ ಗೆಲ್ಲಲಾಗದೆ ಅಸುನೀಗಿದ ಶೌರ್ಯ ಪದಕ ವಿಜೇತ, ಅಂತಿಮ ದರ್ಶನಕ್ಕೆ 2 ಸಾವಿರ ಕಿ.ಮೀ. ದೂರದಿಂದ ಬರುತ್ತಿರುವ ಪಾಲಕರು

    ನವದೆಹಲಿ: ಅವರು ಭಾರತೀಯ ಸೇನಾಪಡೆಯ ವಿಶೇಷ ಪಡೆಯ ಯೋಧರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿನ ಹಲವು ಸೂಕ್ಷ್ಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉಗ್ರರ ವಿರುದ್ಧ ಹೋರಾಡಿದ್ದರು. ಇದಕ್ಕಾಗಿ ಅವರು ಶೌರ್ಯ ಚಕ್ರ ಪದಕದಿಂದ ಅಲಂಕೃತರಾಗಿದ್ದರು. ಆದರೆ, ಕ್ಯಾನ್ಸರ್​ಗೆ ತುತ್ತಾದ ಅವರು, ಅದರ ವಿರುದ್ಧದ ಹೋರಾಟದಲ್ಲಿ ಕೈಚೆಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

    ಅವರೇ ಗುರುಗ್ರಾಮದ ಮೂಲದ ನವಜೋತ್​ ಸಿಂಗ್​ ಬಲ್​ (39). ಇವರು 2002ರಲ್ಲಿ ಭಾರತೀಯ ಸೇನಾಪಡೆಗೆ ಸೇರ್ಪಡೆಗೊಂಡಿದ್ದರು. 2 ಪ್ಯಾರಾ ರೆಜಿಮೆಂಟ್​ನಲ್ಲಿ ಸ್ಪೆಶಲ್​ ಫೋರ್ಸಸ್​ ಆಫೀಸರ್​ ಆಗಿದ್ದರು. ಆ ಪಡೆಯನ್ನು ಮುನ್ನಡೆಸಿದ ಹೆಗ್ಗಳಿಕೆಯೂ ಇವರದ್ದಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೊಲಾಬ್​ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಧೀರೋದಾತ್ತವಾಗಿ ಹೋರಾಡಿದ್ದರು. ಆದ್ದರಿಂದಲೇ ಇವರಿಗೆ ಶಾಂತಿ ಸಮಯದ ಮೂರನೇ ಅತ್ಯುನ್ನತ ಪದಕ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.

    ಆದರೆ ಒಂದು ವರ್ಷದ ಹಿಂದೆ ಇವರಿಗೆ ಕ್ಯಾನ್ಸರ್​ ತಗುಲಿರುವುದು ಗೊತ್ತಾಗಿತ್ತು. ಅಂದಿನಿಂದ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಗುರುವಾರ ನಿಧನರಾದರು. ಪಾಲಕರಲ್ಲದೆ ಪತ್ನಿ, ಎಂಟು ಮತ್ತು ನಾಲ್ಕು ವರ್ಷ ವಯಸ್ಸಿನ ಇಬ್ಬರು ಪುತ್ರರನ್ನು ಅಗಲಿದ್ದಾರೆ.

    ಇವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನಲ್ಲೇ ನೆರವೇರಿಸಲು ಕರ್ನಲ್​ ನವಜೋತ್​ ಸಿಂಗ್​ ಬಲ್​ ಅವರ ಪಾಲಕರು ನಿರ್ಧರಿಸಿದ್ದರು. ಆದರೆ ಆಡಳಿತಾತ್ಮಕ ಅಡೆತಡೆಗಳಿಂದಾಗಿ ಸೇನಾಪಡೆಯ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ದೇಶಾದ್ಯಂತ ಲಾಕ್​ಡೌನ್​ ಹೊರತಾಗಿಯೂ ಇವರು ರಸ್ತೆ ಮಾರ್ಗದಲ್ಲೇ ಗುರುಗ್ರಾಮದಿಂದ ಬೆಂಗಳೂರಿಗೆ ಬರುತ್ತಿದ್ದಾರೆ.

    ಶುಕ್ರವಾರ ಬೆಳಗ್ಗೆ ಹೊರಟಿರುವ ಇವರು ಶನಿವಾರ ಬೆಳಗ್ಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ. ನಂತರದಲ್ಲಿ ಕರ್ನಲ್​ ನವಜೋತ್​ ಸಿಂಗ್​ ಬಲ್​ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

    ಗಡಿಯಲ್ಲಿ ಭಾರತೀಯ ಸೇನಾಪಡೆಯಿಂದ ಉಗ್ರರ ಲಾಂಚ್​ಪ್ಯಾಡ್​ ಮೇಲೆ ಭಾರಿ ದಾಳಿ, ಒಂದು ಲಾಂಚ್​ಪ್ಯಾಡ್​ ಸಂಪೂರ್ಣ ಧ್ವಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts