More

    ಗಲ್ವಾನ್​ ಘರ್ಷಣೆಯ ಗಾಯಾಳು ಯೋಧರ ಆರೋಗ್ಯ ವಿಚಾರಿಸಿದ ಸೇನಾಪಡೆ ಮುಖ್ಯಸ್ಥ

    ನವದೆಹಲಿ: ಲಡಾಖ್​ನ ಪೂರ್ವಭಾಗದ ವಾಸ್ತವ ಗಡಿರೇಖೆ ಬಳಿಯ ವಾಸ್ತವ ಪರಿಸ್ಥಿತಿ ಅರಿಯಲು ಹಾಗೂ ಚೀನಾದ ಮಿಲಿಟರಿ ಅಧಿಕಾರಿಗಳೊಂದಿಗೆ ನಡೆದಿರುವ ಮಾತುಕತೆಯ ವಿವರ ಪಡೆಯಲು ಲಡಾಖ್​ಗೆ ತೆರಳಿರುವ ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ, ಗಲ್ವಾನ್​ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧರ ಆರೋಗ್ಯ ವಿಚಾರಿಸಿದರು.

    ಲೇಹ್​ನ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಯೋಧರ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿದರು. ಸಾಂತ್ವನ ಹೇಳಿದರು.

    ಗಲ್ವಾನ್​ ಘರ್ಷಣೆಯ ಗಾಯಾಳು ಯೋಧರ ಆರೋಗ್ಯ ವಿಚಾರಿಸಿದ ಸೇನಾಪಡೆ ಮುಖ್ಯಸ್ಥ

    ಜೂ.15ರಂದು ಗಲ್ವಾನ್​ ನದಿ ಮತ್ತು ಶಿಯಾಕ್​ ನದಿಯ ಸಂಗಮ ಸ್ಥಳದ ವೈ ಜಂಕ್ಷನ್​ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ರಕ್ತಸಿಕ್ತ ಘರ್ಷಣೆ ಏರ್ಪಟ್ಟು ಭಾರತದ 20 ಯೋಧರು ಹುತಾತ್ಮರಾಗಿದ್ದರು. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು.

    ಭಾರತ ಮತ್ತು ಚೀನಾದ ಹಿರಿಯ ಮಿಲಿಟರಿ ಅಧಿಕಾರಿಗಳು ಗಲ್ವಾನ್​ ಘರ್ಷಣೆ ಮತ್ತು ಇತರ ವಿವಾದಾತ್ಮಕ ವಿಷಯಗಳ ಬಗ್ಗೆ ಸೋಮವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೆ ಸತತ 11 ಗಂಟೆ ಮಾತುಕತೆ ನಡೆಸಿದ್ದರು. ಲಡಾಖ್​ನ ಚುಶುಲ್​ನಲ್ಲಿ ಚೀನಾದ ಪ್ರದೇಶದಲ್ಲಿರುವ ಮಾಲ್ಡೋದಲ್ಲಿ ನಡೆದ ಮಾತುಕತೆಯ ಬೆನ್ನಲ್ಲೇ ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಲಡಾಖ್​ಗೆ ಭೇಟಿ ನೀಡಿದ್ದಾರೆ.

    ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಪರೀಕ್ಷಾ ಕೇಂದ್ರ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts