More

    ಖಾಸಗಿ ವರ್ತಕರಿಂದ ಅಡಕೆ ಬೆಲೆ ಏರಿಕೆ

    ಪುತ್ತೂರು: ಲಾಕ್‌ಡೌನ್‌ನಿಂದ ಹೊರರಾಜ್ಯಗಳಿಗೆ ಅಡಕೆ ಸಾಗಾಟ ಬಹುತೇಕ ಸ್ಥಗಿತಗೊಂಡಿದ್ದು, ಹೊರರಾಜ್ಯಗಳಲ್ಲಿ ಬೇಡಿಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಅಡಕೆ ವರ್ತಕರು ಬೆಲೆ ಏರಿಕೆ ತಂತ್ರ ಅನುಸರಿಸುತ್ತಿದ್ದಾರೆ.

    ಕರಾವಳಿಯ ಬಹುತೇಕ ಗಾರ್ಬಲ್‌ಗಳು ಖಾಲಿಯಾಗಿವೆ. ಹೊರರಾಜ್ಯದ ಮಧ್ಯವರ್ತಿಗಳಿಗೆ ಹೆಚ್ಚುವರಿ ಹಣದ ನೀಡುವ ಆಮಿಷ ನೀಡಿದರೂ ಅಡಕೆ ಸಿಗುತ್ತಿಲ್ಲ. ಅಡಕೆಯನ್ನೇ ನೆಚ್ಚಿರುವ ಗುಜರಾತ್- ರಾಜಸ್ಥಾನದ ವರ್ತಕರಿಗೆ ಇದರಿಂದ ಸಮಸ್ಯೆಯಾಗಿದೆ. ಈ ಮಧ್ಯೆ ಕರಾವಳಿ ಮಾರುಕಟ್ಟೆಯಲ್ಲಿ ಖಾಸಗಿ ವರ್ತಕರು ಬೆಳೆಗಾರರಿಂದ ಮುಂಗಡ ಹಣ ನೀಡಿ ಕ್ಯಾಂಪ್ಕೊ ಮಾರುಕಟ್ಟೆಗಿಂತ 50 ರೂ. ಹೆಚ್ಚಿನ ಧಾರಣೆಗೆ ಅಡಕೆ ಖರೀದಿಸುತ್ತಿದ್ದಾರೆ.

    ಖಾಸಗಿಯವರು ಹೊಸ ಅಡಕೆಗೆ 450, ಹಳೇ ಅಡಕೆಗೆ 550 ರೂಪಾಯಿವರೆಗೂ ನೀಡುತ್ತಿದ್ದಾರೆ. ಆದರೆ, ಖರೀದಿ ಸಂದರ್ಭ ಮುಂಗಡ ಹಣ ಮಾತ್ರ ಕೊಡುತ್ತಾರೆ. ಈ ಮೂಲಕ ಖಾಲಿ ಇರುವ ಗಾರ್ಬಲ್‌ಗಳಲ್ಲಿ ಶೇಖರಿಸಿ, ಕೊರತೆ ಮಾರುಕಟ್ಟೆ ಸೃಷ್ಟಿಸಿ ಹೊರರಾಜ್ಯದ ಮಧ್ಯವರ್ತಿಗಳಿಗೆ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುವುದು ತಂತ್ರಗಾರಿಕೆ.

    ಹೆಚ್ಚುವರಿ ಧಾರಣೆ ಪಡೆದು ಹಣ ಟರ್ನ್‌ಓವರ್ ನಡೆಸುವ ಖಾಸಗಿ ವ್ಯಾಪಾರಿಗಳು ‘ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಡಕೆ ರ‌್ತಾಗುತ್ತಿಲ್ಲ’ ಎಂಬ ನೆಪ ಹೇಳಿ ಮುಂಗಡ ಹಣ ಪಡೆದುಕೊಂಡ ಬೆಳೆಗಾರರಿಗೆ ಹಣ ನೀಡದೆ ಸತಾಯಿಸುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಕೆಲವು ಕಡೆ ತೂಕದಲ್ಲಿ ಮೋಸ, ಧಾರಣೆ ಇಳಿಕೆಯಾಗಿದೆ ಎಂದು ಹೇಳಿ ಬೆಳೆಗಾರರನ್ನು ವಂಚಿಸುತ್ತಿದ್ದಾರೆ ಎಂಬ ಆರೋಪಗಳಿವೆ.

    ವಿವಿಧೆಡೆ ಹಲವು ರೀತಿಯ ಧಾರಣೆ: ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹಲವು ಸಮಯದಿಂದ ಹೊಸ ಅಡಕೆಗೆ 390-400 ರೂ, ಹಳೇ ಅಡಕೆಗೆ 490-500 ರೂ. ಧಾರಣೆ ಸ್ಥಿರವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಒಂದೊಂದು ಕಡೆ ಒಂದೊಂದು ರೀತಿ ಧಾರಣೆ ಇದೆ. ಬೆಳ್ತಂಗಡಿಯಲ್ಲಿ ಹೊಸ ಅಡಕೆ 415-420 ರೂ, ಹಳೇ ಅಡಕೆ 490-500 ರೂ, ಬೆಳ್ಳಾರೆ ಹಾಗೂ ಸುಳ್ಯದಲ್ಲಿ ಹೊಸ ಅಡಕೆ 440-450 ರೂ, ಹಳೇ ಅಡಕೆ 500-550 ರೂ, ಚಾರ್ಮಾಡಿ ವ್ಯಾಪ್ತಿಯಲ್ಲಿ ಹೊಸ ಅಡಕೆ 415-427 ರೂ, ಹಳೇ ಅಡಕೆ 490-530 ರೂ, ಪುತ್ತೂರು- ವಿಟ್ಲ ಭಾಗದಲ್ಲಿ ಹೊಸ ಅಡಕೆ 410-440 ರೂ, ಹಳೇ ಅಡಕೆ 490-535 ರೂ. ಧಾರಣೆ ಇದೆ.

    ಸದ್ಯದ ಪರಿಸ್ಥಿತಿಯಲ್ಲಿ ಕ್ಯಾಂಪ್ಕೊ ಮಾರುಕಟ್ಟೆ ಧಾರಣೆ ಉತ್ತಮವಾಗಿದೆ. ಗ್ರಾಮೀಣ ಭಾಗದಲ್ಲಿ ಬೆಳೆಗಾರರಿಗೆ ಮುಂಗಡವಾಗಿ ಹಣ ನೀಡಿ ಹೆಚ್ಚುವರಿ ಧಾರಣೆ ನಿಗದಿಪಡಿಸಿ ಅಡಕೆ ಖರೀದಿಸುವ ಜಾಲದ ಬಗ್ಗೆ ದೂರುಗಳಿವೆ. ಖಾಸಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದರೂ ಕ್ಯಾಂಪ್ಕೊ ಬೆಳೆಗಾರರಿಗೆ ತೊಂದರೆಯಾಗದಂತೆ ಧಾರಣೆ ನೀಡುತ್ತದೆ.
    – ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts