More

    ಅಕ್ರಮ ಅಡಕೆ ಸಾಗಾಟ ಪ್ರಕರಣದಲ್ಲಿ 53 ಲಕ್ಷ ರೂ. ದಂಡ ವಸೂಲು

    ಕುಂದಾಪುರ: ಐದು ತಿಂಗಳ ಹಿಂದೆ ವಂಡ್ಸೆಯಲ್ಲಿ ನಕಲಿ ದಾಖಲೆಗಳೊಂದಿಗೆ ಸಾಗಿಸುತ್ತಿದ್ದ 247 ಕ್ವಿಂಟಾಲ್ ಅಡಕೆ ವಶಪಡಿಸಿಕೊಂಡ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ತಪ್ಪಿತಸ್ಥರಿಂದ ದಂಡ ಹಾಗೂ ತೆರಿಗೆ ಮೊತ್ತವಾಗಿ 53,10,500 ರೂ. ವಸೂಲು ಮಾಡಿದೆ.

    ಮೇ 23ರಂದು ಅಂಪಾರು-ಕೊಲ್ಲೂರು ರಸ್ತೆಯ ವಂಡ್ಸೆಯಲ್ಲಿ ಸರಕು ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದ್ದು, ವಶಪಡಿಸಿಕೊಂಡ ಸರಕು ಹಾಗೂ ಲಾರಿಯನ್ನು ಕೋಟ ಪೊಲೀಸ್ ಠಾಣೆ ವಶಕ್ಕೆ ಒಪ್ಪಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ಮಂಗಳೂರು ಪಶ್ಚಿಮ ವಲಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಕೈಗೊಂಡಿದ್ದರು.

    ಸಾಗಣೆದಾರರಾದ ಪುತ್ತೂರಿನ ಯೂನಿಯನ್ ಕಾರ್ಗೋ ಮೂವರ್ಸ್‌ ಕರ್ನಾಟಕದಲ್ಲಿ ಅಡಕೆ ಪಡೆದು ಅದನ್ನು ಕೇರಳದ ವರ್ತಕರಿಗೆ ನಕಲಿ ದಾಖಲಿಗಳೊಂದಿಗೆ ಸಾಗಿಸುತ್ತಿದ್ದರು. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 129(1)(ಬಿ) ಅಡಿಯಲ್ಲಿ ಆದೇಶ ಹೊರಡಿಸಿ ತೆರಿಗೆ, ದಂಡ ಪಾವತಿಸಲು ಆದೇಶಿಸಲಾಗಿತ್ತು.

    ಸೋಮವಾರ ಈ ಮೊತ್ತ ಪಾವತಿಸಿದ್ದಾರೆ ಎಂದು ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ (ಜಾರಿ) ಉದಯಶಂಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts